ನ್ಯೂಸ್ ನಾಟೌಟ್: ಶಾಲಾ-ಕಾಲೇಜಿನ ಕೊಠಡಿಯೊಳಗೆ ಕುಳಿತು ಪಾಠ ಕೇಳುವುದಲ್ಲದೆ ಉತ್ತಮ ಕೆಲಸವನ್ನೂ ಮಾಡಿ ಮಾದರಿಯಾಗಬಹುದು ಅನ್ನುವುದನ್ನು ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ನಿರೂಪಿಸಿ ತೋರಿಸಿದ್ದಾರೆ.
ಸುಳ್ಯದಲ್ಲಿ ಮಧ್ಯಾಹ್ನದ ನಂತರ ಉತ್ತಮ ಮಳೆ ಸುರಿಯಿತು. ಒಂದಷ್ಟು ಕಡೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಯಿತು. ಅಂತಹುದೇ ಒಂದು ಸಮಸ್ಯೆ ಕೊಡಿಯಾಲ್ ಬೈಲ್ ಬಳಿಯ ಸೇತುವೆಯಲ್ಲೂ ಆಯಿತು. ಸೇತುವೆ ಮೇಲೆ ಭಾರೀ ನೀರು ತುಂಬಿಕೊಂಡಿತ್ತು. ಇದರಿಂದ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸುತ್ತಿದ್ದರು. ಈ ವೇಳೆ ಮೂರ್ನಾಲ್ಕು ವಿದ್ಯಾರ್ಥಿನಿಯರು ಸೇತುವೆಯ ಮೇಲಿದ್ದ ಕಸವನ್ನು ಹೊರಕ್ಕೆ ತೆಗೆದು ಸರಾಗವಾಗಿ ನೀರು ಹರಿಯುವಂತೆ ಮಾಡಿದರು. ವಿದ್ಯಾರ್ಥಿನಿಯರ ಕಳಕಳಿಗೆ ಈಗ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.