ನ್ಯೂಸ್ ನಾಟೌಟ್: ಮತ ಪತ್ರಗಳ ಮೂಲಕ ಮತದಾನ ಮಾಡುವ ಕಾಲ ಇದಲ್ಲ. ಈಗೇನಿದ್ದರೂ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಮೆಷಿನ್ ಗಳದ್ದೇ ದರ್ಬಾರ್. ಪ್ರತಿ ಚುನಾವಣೆಯಲ್ಲೂ ಇದರದ್ದೇ ಮಾತು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ದೇಶದ ಸಾರ್ವತ್ರಿಕ ಚುನಾವಣೆಯಲ್ಲಾದ ಬದಲಾವಣೆ. ಒಂದಿಷ್ಟು ಶಾಲೆಗಳಲ್ಲೂ ವೋಟಿಂಗ್ ಮೆಷಿನ್ ಮಾದರಿಯ ರಚನೆ ಮಾಡಲಾಗಿತ್ತು.
ಇವಿಎಂ ಮಾದರಿಯಲ್ಲೇ ವೋಟ್ ಮಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗಿತ್ತು. ಈ ನಡುವೆ ಹಳೆಯ ಸಾಂಪ್ರದಾಯಿಕ ಮತ ಪತ್ರದ ಮೂಲಕ ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳಿಗೆ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆ ನಡೆಯಿತು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಚುನಾವಣೆಯಲ್ಲಿ ಪಾಲ್ಗೊಂಡರು. ರಾಜಕಾರಣಿಗಳಂತೆ ಗೆಲುವಿನ ಸಂಭ್ರಮವನ್ನು ಕಂಡರು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ದ್ರವ್ಯ. ಎಂ. ಡಿ (ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ), ಕಾರ್ಯದರ್ಶಿಯಾಗಿ ಜೋಯ್ಸ್ಟನ್ ಕ್ರಾಸ್ತ (ಪ್ರಥಮ ಪಿಯುಸಿ ವಿಜ್ಞಾನ ವಿಭಾಗ), ಕ್ರೀಡಾ ಕಾರ್ಯದರ್ಶಿಯಾಗಿ ಕೃತಿಕಾ .ಜಿ ಬಾಳುಗೋಡು (ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ), ಜತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಇಶಾಮ್ (ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚಂದನ ಪಿ.ಎ (ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ), ಜತೆ ಕಾರ್ಯದರ್ಶಿಯಾಗಿ ತನುಜ್ಞ .ಸಿ. ಕೆ (ಪ್ರಥಮ ಪಿಯುಸಿ ವಿಜ್ಞಾನ ವಿಭಾಗ) ಆಯ್ಕೆಯಾದರು. ರಾಜ್ಯಶಾಸ್ತ್ರ ಉಪನ್ಯಾಸಕ ದಾಮೋದರ .ಎನ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪ್ರಾಂಶುಪಾಲೆ ದಯಾಮಣಿ ಕೆ, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಸಹಕರಿಸಿದರು.
Click 👇