ನ್ಯೂಸ್ ನಾಟೌಟ್: ಗೋವೊಂದು ಹೊಳೆಗೆ ಬಿದ್ದು ಒದ್ದಾಟ ನಡೆಸುತ್ತಿತ್ತು. ನೀರಿನಿಂದ ಮೇಲೆ ಬರಲಾಗದೆ ಸಂಪಾಜೆಯ ಕಲ್ಲುಗುಂಡಿಯ ಹೊಳೆಯ ಬಳಿಯಲ್ಲಿ ಮೂಕ ರೋಧನ ವ್ಯಕ್ತಪಡಿಸುತ್ತಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಂಪಾಜೆ ಗ್ರಾಮ ಪಂಚಾಯತ್ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಅವರು ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷರಾದ ಜಿ.ಕೆ ಹಮೀದ್ ಗಮನಕ್ಕೆ ತಂದರು. ತಕ್ಷಣ ಸುಳ್ಯದಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಬರುವಂತೆ ಮಾಡಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ .ಕೆ ಹನೀಫ್ ನೇತೃತ್ವದಲ್ಲಿ ದನವನ್ನು ನೀರಿನಿಂದ ಮೇಲಕ್ಕೆ ಎತ್ತಲಾಯಿತು. ಬಳಿಕ ಸುಳ್ಯದ ಪಶು ಇಲಾಖೆಯಿಂದ ಬಂದಿದ್ದ ತಜ್ಞರು ಪಶುವಿಗೆ ಅಗತ್ಯವಿದ್ದ ಚಿಕಿತ್ಸೆ ನೀಡಿದರು. ಕರಾವಳಿ ಹೋಟೆಲ್ ಮಾಲೀಕ ರಫೀಕ್, ಅಶ್ರಫ್ (ಸದ್ದಾಂ), ಶರಣ್ ಸಂಪಾಜೆ, ವಿನೋದ್ ರೈ, ರಶೀದ್ (60) ಮತ್ತಿತರರು ಸಹಕರಿಸಿದ್ದರು.