ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಕಾರು ಕಲಿತಿದ್ದ ಯುವತಿ, ಕಾರು ಚಲಾಯಿಸುತ್ತಾ ರಿವರ್ಸ್ ಗೇರ್ನಲ್ಲಿದ್ದಾಗ ಎಕ್ಸಲೇಟರ್ ಒತ್ತಿದ್ದಾಳೆ, ಪರಿಣಾಮ ಕಾರು ಕಂದಕಕ್ಕೆ ಬಿದ್ದು ಆಕೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ 23 ವರ್ಷದ ಯುವತಿ ರಿವರ್ಸ್ ಗೇರ್ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್ ಬ್ಯಾರಿಯರ್ ಅನ್ನು ಮುರಿದು ಕಂದಕಕ್ಕೆ ಬಿದ್ದಿದೆ. ಸುಲಿಭಂಜನ್ ಪ್ರದೇಶದಲ್ಲಿ ಜೂ.17ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಯುವತಿಯನ್ನು ಶ್ವೇತಾ ಸುರ್ವಾಸೆ ಎಂದು ಗುರುತಿಸಲಾಗಿದೆ. ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ ಎನ್ನಲಾಗಿದೆ. ಶ್ವೇತಾಗೆ ಕಾರು ಓಡಿಸುವಾಗ (reels)ರೀಲ್ಗಳನ್ನು ತಯಾರಿಸುವ ಆಸೆ ಇತ್ತು.
ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್ ಮಾಡುವಂತೆ ಕೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್ನಲ್ಲಿ ಚಲಿಸಲು ಪ್ರಾರಂಭಿಸಿತು ಮತ್ತು ಶ್ವೇತಾ ಏನು ಮಾಡಬೇಕೆಂದು ತೋಚದೆ ಮತ್ತೆ ಎಕ್ಸಲೇಟರ್ ಅನ್ನು ಒತ್ತಿದ್ದಾಳೆ. ನಿಯಂತ್ರಣ ತಪ್ಪಿ ಹಿಂದೆ ಇದ್ದ ಕಂದಕಕ್ಕೆ ಬಿದ್ದಿದೆ. ಕಾರು ಚಾಲನೆ ಮಾಡುವಾಗ ಆಕೆಯ ಸ್ನೇಹಿತ ಶಿವರಾಜ್ ಎಂಬಾತ ವಿಡಿಯೋ ಮಾಡುತ್ತಿದ್ದ. ಶಿವರಾಜ್ ಕ್ಲಚ್ ಕ್ಲಚ್ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿತ್ತು ಎಂದು ವರದಿ ತಿಳಿಸಿದೆ.
Click 👇