ಇನ್ಸ್ಟಾಗ್ರಾಮ್ ರೀಲ್ಸ್​ಗಾಗಿ ಬೃಹತ್ ಕಟ್ಟಡದ ತುದಿಗೆ ಹೋಗಿ ನೇತಾಡಿದ ಯುವತಿ..! ಇಬ್ಬರನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಇನ್ಸ್ಟಾಗ್ರಾಮ್ ರೀಲ್ಸ್ ಗಾಗಿ ಕಟ್ಟಡದ ತುದಿಗೆ ಹೋಗಿ ಅಪಾಯಕಾರಿ ಸ್ಟಂಟ್​ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಮಿಹಿರ್ ನಿತಿನ್ ಗಾಂಧಿ (24) ಮತ್ತು ಮಿನಾಕ್ಷಿ ಸಾಳುಂಖೆ (23) ಎಂದು ಗುರುತಿಸಲಾಗಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಅನ್ನು ಚಿತ್ರೀಕರಿಸುವಾಗ ಕಟ್ಟಡದ ತುದಿಯಿಂದ ನೇತಾಡುವ ಮೂಲಕ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಪಾಯಕಾರಿ ಸಾಹಸವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಣ್ಣ ವಿಡಿಯೋ ತುಣುಕಿನಲ್ಲಿ ಕಟ್ಟಡದ ಮೇಲೆ ನೇತಾಡುತ್ತಿರುವ ಯುವತಿ ಮತ್ತು ಮೇಲ್ಗಡೆಯಿಂದ ಯುವಕ ಆಕೆಯ ಕೈಯನ್ನು ಹಿಡಿದಿರುವುದು ಸೆರೆಯಾಗಿದೆ. ವೀಡಿಯೋವನ್ನು ಗಮನದಲ್ಲಿಟ್ಟುಕೊಂಡು, ಪುಣೆ ಪೊಲೀಸರು ಅವರ ವಿರುದ್ಧ ಸೆಕ್ಷನ್ 308 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಇಬ್ಬರನ್ನು ಬಂಧಿಸಿದ್ದಾರೆ. ಅವರಿಗೆ ಕನಿಷ್ಠ 6 ತಿಂಗಳ ಜೈಲುಶಿಕ್ಷೆ, ಅಥವಾ ದಂಡವನ್ನು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. Click 👇