- +91 73497 60202
- [email protected]
- November 23, 2024 1:57 AM
ನ್ಯೂಸ್ ನಾಟೌಟ್: ರಾಮಾಯಣ ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ1.02 ಲಕ್ಷ ರೂ. ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ. ಈ ನಾಟಕವು ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಆರೋಪಿಸಲಾಗಿದೆ. ಮಾರ್ಚ್ 31 ರಂದು ಇನ್ಸ್ಟಿಟ್ಯೂಟ್‌ನ ‘ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್’ ನಲ್ಲಿ ‘ರಾಹೋವನ್’ ಎಂಬ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು. ಈ ಕಾರಣಕ್ಕೆ ಎಲ್ಲಾ ಎಂಟು ವಿದ್ಯಾರ್ಥಿಗಳ ಮೇಲೆ ಬಾಂಬೆ ಐಐಟಿ ದಂಡ ಹಾಕಿದೆ. ಮೇ 8 ರಂದು ನಡೆದ ಶಿಸ್ತು ಕ್ರಮ ಸಮಿತಿ (ಡಿಎಸಿ) ಸಭೆಯಲ್ಲಿ ಐಐಟಿ ಈ ವಿಷಯವನ್ನು ಪ್ರಸ್ತಾಪಿಸಿ ಕ್ರಮಕೈಗೊಂಡಿದೆ. ಜೂನ್ 4 ರಂದು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದೆ. ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ 1.20 ಲಕ್ಷ ರೂ. ದಂಡ ವಿಧಿಸಿದೆ. ಪದವಿಪೂರ್ವ ವಿದ್ಯಾರ್ಥಿಗಳಾದ ಇತರ ನಾಲ್ವರು ವಿದ್ಯಾರ್ಥಿಗಳಿಗೆ 40,000 ರೂ. ದಂಡವನ್ನು ಪಾವತಿಸುವಂತೆ ಹೇಳಲಾಗಿದೆ. ಅಲ್ಲದೇ ಹಾಸ್ಟೆಲ್ ವಸತಿಗಳನ್ನು ಖಾಲಿ ಮಾಡುವಂತೆ ಅವರಿಗೆ ಆದೇಶಿಸಲಾಗಿದೆ. ಐಐಟಿ ವಿದ್ಯಾರ್ಥಿಗಳ ಗುಂಪೊಂದು ಸಂಸ್ಥೆಯಲ್ಲಿ ಔಪಚಾರಿಕ ದೂರು ದಾಖಲಿಸಿದೆ. ನಾಟಕವು ಹಿಂದೂ ನಂಬಿಕೆಗಳ ಅವಹೇಳನಕಾರಿ ಉಲ್ಲೇಖಗಳನ್ನು ಒಳಗೊಂಡಿದೆ. ರಾಮನನ್ನು ‘ದೆವ್ವ’ ಎಂದು ಚಿತ್ರಿಸಲಾಗಿದೆ. ಸೀತಾ, ರಾಮ ಮತ್ತು ಲಕ್ಷ್ಮಣನ ಪಾತ್ರಗಳಲ್ಲಿ ಅನುಚಿತ ಭಾಷೆ ಮತ್ತು ಸನ್ನೆಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.‘ರಾಹೋವನ್’ದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ