ನ್ಯೂಸ್ ನಾಟೌಟ್: ಭಾರತೀಯ ರೈಲ್ವೆ ಇಲಾಖೆಯು ಮುಂದಿನ ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ ಹಲವು ನೇಮಕ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಿದೆ. ಅವುಗಳ ಪೈಕಿ ದ್ವಿತೀಯ ಪಿಯುಸಿ ಪಾಸಾದವರಿಗೆ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ – ಪದವಿಗಿಂತ ಕೆಳಹಂತದ ಅರ್ಹತೆಯ ಹುದ್ದೆಗಳಿಗೆ ಸಹ ನೇಮಕ ನೋಟಿಫಿಕೇಶನ್ ಬಿಡುಗಡೆ ಮಾಡುವ ಕುರಿತು ತನ್ನ ನೇಮಕಾತಿ ಕ್ಯಾಲೆಂಡರ್ನಲ್ಲಿ ಮಾಹಿತಿ ನೀಡಿದೆ.
ರೈಲ್ವೆಯಲ್ಲಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಲ್ಲಿ ಲೆವೆಲ್ 2 ಹಾಗೂ ಲೆವೆಲ್ 3 ಹುದ್ದೆಗಳಾದ – ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಟೈಮ್ ಕೀಪರ್, ಟ್ರೈನ್ಸ್ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಗೂಡ್ಸ್ ಗಾರ್ಡ್, ಸೀನಿಯರ್ ಟೈಮ್ ಕೀಪರ್ ಹುದ್ದೆಗಳಿವೆ.
ಈ ಹುದ್ದೆಗಳಿಗೆ 7ನೇ ವೇತನ ಆಯೋಗದ ಲೆವೆಲ್ 2, 3 ಸಂಭಾವನೆ ಇರುತ್ತದೆ.
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (ಲೆವೆಲ್ 2) : Rs.19,900.
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (ಲೆವೆಲ್ 2) : Rs.19,900.
ಜೂನಿಯರ್ ಟೈಮ್ ಕೀಪರ್ (ಲೆವೆಲ್ 2) : Rs.19,900.
ಟ್ರೈನ್ಸ್ ಕ್ಲರ್ಕ್ (ಲೆವೆಲ್ 2) : Rs.19,900.
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ (ಲೆವೆಲ್ 3) : Rs.21,700.
ಇದು ಕೇವಲ ಬೇಸಿಕ್ ಪೇ ಅಷ್ಟೆ. ಆದರೆ ಈ ವೇತನದ ಜತೆಗೆ ಗ್ರೇಡ್ ಪೇ, ತುಟ್ಟಿ ಭತ್ಯೆ, ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆಗಳು ಸಹ ಸಿಗಲಿವೆ ಎಂದು ವರದಿ ತಿಳಿಸಿದೆ.
Click 👇