ನ್ಯೂಸ್ ನಾಟೌಟ್: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣದ್ದು ಎನ್ನಲಾದ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ದಂಧೆ ಮಾಡುತ್ತಿದ್ದಾರೆ ಎಂಬ ಆರೋಪ ಜೋರಾಗಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಲೈಕ್ಗಳಿಗಾಗಿ ಜನರ ದಾರಿ ತಪ್ಪಿಸಿ ಕೆಟ್ಟ ಗೀಳಿಗೆ ಗುರಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಿಡಿಯೋ ಬೇಕೆಂದರೆ ಇಂತಿಷ್ಟು ಹಣ ನೀಡಬೇಕು ಎಂಬ ಆಮಿಷವೂ ಜೋರಾಗಿದೆ.
ಇತ್ತೀಚೆಗೆ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಇಡೀ ಹಾಸನದೆಲ್ಲೆಡೆ ಹರಿದಾಡಿತ್ತು. ವಿಡಿಯೋ ವೈರಲ್ ಆದ ಬಳಿಕ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಅದೆಷ್ಟೋ ಮಹಿಳೆಯರ ಕುಟುಂಬ ಹಾಳಾಗಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ. ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳಿವೆ. ಡಿಎಂ ಮಾಡಿ ಲೈಕ್ ಮಾಡಿ ವಿಡಿಯೋ ಬೇಕಿದ್ರೆ ಹಣ ಕಳಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದಂಧೆಗಿಳಿದಿದ್ದಾರೆ. ಲೈಕ್ ಗೋಸ್ಕರ, ಹಣಕ್ಕಾಗಿ ಪ್ರಜ್ವಲ್ ರೇವಣ್ಣ ವಿಡಿಯೋ ಆಮಿಷವೊಡ್ಡುತ್ತಿದ್ದಾರೆ ಎನ್ನಲಾಗಿದೆ.
ಸೋಷಿಯಲ್ ಮಿಡಿಯಾದಲ್ಲಿ ಸಂತ್ರಸ್ತೆಯರ ಫೋಟೋ ಬಳಸಿ ದಂಧೆ ನಡೆಸಲಾಗುತ್ತಿದೆ. ಕೆಲ ಸ್ಟಾರ್ ನಟಿಯರ ಫೋಟೋ ಬಳಸಿಯೂ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣ ಇಂತಹ ಕೆಟ್ಟ ಕೆಲಸಗಳಿಗೆ ಬಳಕೆಯಾಗುತ್ತಿರುವುದು ಆತಂಕಕಾರಿ.
Click 👇