ನ್ಯೂಸ್ ನಾಟೌಟ್ : ಅಶ್ಲೀಲ ವಿಡಿಯೋ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು ಮತ್ತೆ 4 ದಿನ ಪೊಲೀಸ್ ಕಸ್ಟಡಿಗೆ ನೀಡಿ ಎಸಿಎಂಎಂ 42ನೇ ನ್ಯಾಯಾಲಯ ಇಂದು(ಜೂ.6) ಆದೇಶ ಮಾಡಿದೆ.
ಆರೋಪಿ ಪ್ರಜ್ವಲ್ ರೇವಣ್ಣನ ಪೊಲೀಸ್ ಕಸ್ಟಡಿ ಇಂದು(ಜೂ.೬) ಅಂತ್ಯವಾಗಿದ್ದ ಕಾರಣ ಇಂದು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು, ಕೋರ್ಟ್ ಮತ್ತೆ ಜೂನ್10 ರವರೆಗೆ ಕಸ್ಟಡಿಗೆ ನೀಡಿದೆ ಎಂದು ವರದಿ ತಿಳಿಸಿದೆ. ಎಸ್ಐಟಿ ಪರ ವಕೀಲರು ತನಿಖೆಗೆ ಸಮಯ ಸಾಕಾಗಿಲ್ಲ. ಮೊಬೈಲ್ ವಿಚಾರವಾಗಿ ಮಾಹಿತಿ ಇನ್ನೂ ಕೂಡ ಸಿಕ್ಕಿಲ್ಲ. ಮುಖ್ಯವಾಗಿ ಟೈಂ ಶಾರ್ಟೆಜ್ ಆಗಿದೆ. ವಿದೇಶದಲ್ಲಿ ಇದ್ದಾಗ ಹಣ ಹೇಗೆ ಸಂದಾಯ ಆಗಿದೆ ಗೊತ್ತಾಗಿಲ್ಲ. ಇವರು ತಲೆಮರೆಸಿಕೊಂಡಿದ್ದ ಆರೋಪಿಯಾಗಿರುವುದರಿಂದ ಇವರಿಗೆ ಹಣ ನೀಡಿದವರು ಯಾರು ಎಂದು ಗೊತ್ತಾಗಬೇಕು. ಕೆಲವು ಸಂತ್ರಸ್ತೆಯರು, ಸಾಕ್ಷಿಗಳನ್ನು ಮುಖಾಮುಖಿ ಮಾಡಬೇಕಾಗಿದೆ. ಏನು ಕೇಳಿದ್ರೂ ಸರಿಯಾದ ಉತ್ತರವನ್ನು ನೀಡಿಲ್ಲ. ನಾನು ಏನು ಮಾಡಿಲ್ಲ ಎಂದೇ ಪ್ರಜ್ವಲ್ ಹೇಳುತ್ತಾ ಬಂದಿದ್ದಾರೆ. ಇದರ ಜೊತೆಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದರು ಎಂದಿದ್ದಾರೆ.
ಈ ಎಲ್ಲಾ ಕಾರಣಗಳನ್ನು ನೀಡಿ ಪ್ರಜ್ವಲ್ ರೇವಣ್ಣನನ್ನು ಜೂನ್10 ರ ತನಕ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮತ್ತೆ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎನ್ನಲಾಗಿದೆ.
Click 👇