ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಗೆಳತಿ, ಪವಿತ್ರಾ ಗೌಡ ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುವಂತಾಗಿದೆ.
ಐಶಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಇದರಿಂದ ಸಾಮಾನ್ಯ ಕೈದಿಯಂತೆ ಜೀವನ ನಡೆಸಬೇಕಾಗಿದೆ. ವಿಶೇಷವೆಂದರೆ ‘ಡಿ’ ಬಾಸ್ ಗೆಳತಿಗೆ ಜೈಲಿನಲ್ಲಿಯೂ “ಡಿ’ ಬ್ಯಾರಕ್ ಸಿಕ್ಕಿದೆ.
ತನ್ನ ದೈನಂದಿನ ಕೆಲಸ ಮುಗಿಸಿ ಯಾರೊಂದಿಗೂ ಹೆಚ್ಚು ಮಾತನಾಡದ ಪವಿತ್ರಾ ಗೌಡ ಮೌನಕ್ಕೆ ಶರಣಾಗಿದ್ದಾರೆ. ಅವರಿಗೆ 6024 ಕೈದಿ ಸಂಖ್ಯೆ ನೀಡಲಾಗಿದೆ. ಪವಿತ್ರಾ ಗೌಡ ಜತೆ ಇದೇ ಬ್ಯಾರಕ್ನಲ್ಲಿ 8 ಮಹಿಳಾ ಕೈದಿಗಳಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದ ಅವರು, ಸರಿಯಾಗಿ ನಿದ್ದೆ ಬಾರದೆ ಪದೇ ಪದೆ ಎದ್ದು ಕುಳಿತಿದ್ದಾರೆ. ಶುಕ್ರವಾರ ಮುಂಜಾನೆ 5 ಗಂಟೆಗೆ ಎದ್ದು ಜೈಲಿನ ಬ್ಯಾರಕ್ನಲ್ಲಿ ವಾಕಿಂಗ್ ಮಾಡಿ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಉಪ್ಪಿಟ್ಟು, ಕಾಫಿ ಸೇವಿಸಿದ್ದಾರೆ. ಮಧ್ಯಾಹ್ನ ಅನ್ನ, ಸಾಂಬಾರ್, ಮುದ್ದೆ ತಿಂದಿದ್ದಾರೆ. ರಾತ್ರಿಯೂ ಅನ್ನ, ಸಾಂಬಾರ್ ತಿಂದಿದ್ದಾರೆ. ಉಳಿದ 8 ಆರೋಪಿಗಳು ಪವಿತ್ರಾ ಜತೆ ಕ್ವಾರಂಟೈನ್ ಸೆಲ್ನಲ್ಲಿ ಒಂದೇ ಕಡೆಯಿದ್ದಾರೆ.
ಗುರುವಾರ ರಾತ್ರಿ ಪವಿತ್ರಾ ಗೌಡಗೆ ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು. ಅಲ್ಲದೇ ಇತರ ಒಂಬತ್ತು ಆರೋಪಿಗಳಿಗೂ ತಪಾಸಣೆ ನಡೆಸಲಾಗಿತ್ತು. ಎಲ್ಲರೂ ಆರೋಗ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.