ನ್ಯೂಸ್ ನಾಟೌಟ್: ವಿದ್ಯುತ್ ಲೈನ್ ಸರಿಪಡಿಸುತ್ತಿದ್ದಾಗ ಸೋಮವಾರ (ಜೂ.17) ಅವಘಡ ಸಂಭವಿಸಿ ಕಾರ್ಮಿಕನೊಬ್ಬ ಕಂಬದಿಂದ ಕೆಳಕ್ಕೆ ಬಿದ್ದು ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆ ಪಂಜರಿಂದ ವರದಿಯಾಗಿದೆ. ಮಳೆಗಾಲದಲ್ಲಿ ಲೈನ್ ರಿಪೇರಿ ಸಾಮಾನ್ಯ. ಕಂಬ ಏರುವ ಮೊದಲು ಆ ಭಾಗದ ಕರೆಂಟ್ ಲೈನ್ ಆಫ್ ಮಾಡಲಾಗುತ್ತದೆ.
ಹೀಗಿದ್ದರೂ ಆತ ಕಂಬದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವುದು ಹೇಗೆ ಅನ್ನುವುದರ ಬಗ್ಗೆ ಹಲವು ಸಂಶಯ ಕಾಡುತ್ತಿದೆ. ಆ ಭಾಗದಲ್ಲಿ ಸಿಡಿಲಿನ ಪ್ರಮಾಣ ಹೆಚ್ಚಿತ್ತು. ಇಂತಹ ಸಂದರ್ಭದಲ್ಲಿ ಕರೆಂಟ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ. ತನಿಖೆ ಆರಂಭವಾಗಿದ್ದು ಇನ್ನಷ್ಟೇ ವಾಸ್ತವಾಂಶ ಹೊರಬೀಳಬೇಕಿದೆ.
Click 👇