ನ್ಯೂಸ್ ನಾಟೌಟ್: ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧ ಉತ್ತಮವಾಗಿದ್ದರೆ ಮಾತ್ರ ಸಮೃದ್ಧ ಪರಿಸರ ನಿರ್ಮಾಣ ಸಾಧ್ಯ. ಅರಣ್ಯ ನಾಶದಿಂದ ಪ್ರಾಣಿ, ಪಕ್ಷಿ, ಉರಗ ಸಂತತಿಗಳು ನಾಡಿಗೆ ಬರುತ್ತವೆ. ಆದ್ದರಿಂದ ಹಾವು ಮತ್ತು ಅವುಗಳ ಸಂತತಿ ನಾಶವಾಗದಂತೆ ರಕ್ಷಣೆ ಮಾಡಬೇಕು ಎಂದು ಉರಗ ತಜ್ಞ ತೇಜಸ್ ಪುತ್ತೂರು ಹೇಳಿದರು.
ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿಷಕಾರಿ, ವಿಷಕಾರಿಯಲ್ಲದ ಹಾವುಗಳ ಮಾಹಿತಿ, ಮುಂಜಾಗ್ರತೆ, ಹಾವು ಕಡಿದಾಗ ತತ್ ಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾoಶುಪಾಲೆ ಮಿಥಾಲಿ ಪಿ.ರೈ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕಲು ಅವಕಾಶ ಕಲ್ಪಿಸಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ವಿಜ್ಞಾನ ಸಂಘದ ಸಂಚಾಲಕಿ, ಸಂಸ್ಥೆಯ ಜೀವಶಾಸ್ತ್ರ ಉಪನ್ಯಾಸಕಿ ವಿನುತ ಕೆ.ಎನ್., ಸಚಿನ್ ಪುತ್ತೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪವಿತ್ರ ಮತ್ತು ಬಳಗದವರು ಪರಿಸರ ಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ವಿನುತ ಕೆ.ಎನ್. ಸ್ವಾಗತಿಸಿ, ಪ್ರಸ್ತಾವನೆಗೈದರು. ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಆಯಿಷತ್ ಅಸ್ನ ನಿರೂಪಿಸಿ, ಸುಮಂತ್ ವಂದಿಸಿದರು. ಪದವಿ, ಪ.ಪೂ. ವಿಭಾಗದ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ಜೀವ ಸಂಕುಲ ವೈವಿಧ್ಯದ ಸಾಕ್ಷ್ಯಚಿತ್ರ ಬಿತ್ತರಿಸಲಾಯಿತು.