- +91 73497 60202
- [email protected]
- November 22, 2024 9:44 PM
ನ್ಯೂಸ್ ನಾಟೌಟ್: 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ದಂಪತಿ (Naxal) ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರ ಮುಂದೆ ಶರಣಾದ ಘಟನೆ ಮಹಾರಾಷ್ಟ್ರದ ಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ. ಗಿರಿಧರ್ ಎಂದೂ ಕರೆಯಲ್ಪಡುವ ‘ನಕ್ಸಲೈಟ್ ನಂಗ್ಸು ತುಮ್ರೆಟಿ’ ತನ್ನ ಪತ್ನಿ ಸಂಗೀತಾ ಉಸೇಂಡಿ ಅಲಿಯಾಸ್ ಲಲಿತಾಳೊಂದಿಗೆ ಶನಿವಾರ(ಜೂ.22) ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಶರಣಾದರು. ಗಿರಿಧರ್ ವಿರುದ್ಧ 170ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಆತನ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತನ ಪತ್ನಿ ವಿರುದ್ಧ 17 ಪ್ರಕರಣಗಳಿದ್ದು, ಆಕೆ ತಲೆಗೆ 16 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈಗ ಇಬ್ಬರೂ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಗಿರಿಧರ್ 1996 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಎಡಪಲ್ಲಿ ದಳಕ್ಕೆ ಸೇರಿದ್ದ. ಗಡ್ಚಿರೋಲಿಯಲ್ಲಿ ಅದರ ಚಟುವಟಿಕೆಗಳ ಮುಖ್ಯಸ್ಥನಾಗಿದ್ದ. ಈತನ ವಿರುದ್ಧ 86 ಎನ್‌ಕೌಂಟರ್‌ಗಳು ಮತ್ತು 15 ಬೆಂಕಿ ಹಚ್ಚಿ ಕೊಂದದ್ದು ಸೇರಿದಂತೆ 179 ಪ್ರಕರಣಗಳಿವೆ. ಆತನ ಪತ್ನಿ ಲಲಿತಾ ಕೂಡ 17 ಪ್ರಕರಣಗಳನ್ನು ಎದುರಿಸುತ್ತಿದ್ದಾಳೆ, ಉಳಿದಂತೆ ಇನ್ನೂ ಹಲವು ಸಣ್ಣ-ಪುಟ್ಟ ಪ್ರಕರಣಗಳಿದ್ದವು. ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗಿರಿಧರ್ ಗೆ 15 ಲಕ್ಷ ರೂ. ಮತ್ತು ಲಲಿತಾಗೆ 8.50 ಲಕ್ಷ ರೂ. ನೀಡಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ