ನ್ಯೂಸ್ ನಾಟೌಟ್: ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ ಪದವಿ ಮಾರ್ಗದರ್ಶಕರ ಕಾರ್ಯಾಗಾರ ಸಮಾರೋಪ ಸಮಾರಂಭ ಬುಧವಾರ (ಜೂ.12) ಸಂಜೆ ನೆರವೇರಿತು.
“ಸೈನ್ಟಿಫಿಕ್ ರೈಟಿಂಗ್, ರಿಸರ್ಚ್ ಇಂಟೆಗ್ರಿಟಿ ಮತ್ತು ಪಬ್ಲಿಕೇಶನ್ ಎಥಿಕ್ಸ್”ನ ಸ್ನಾತಕೋತ್ತರ ಪದವಿ ಮಾರ್ಗದರ್ಶಕರ ಕಾರ್ಯಾಗಾರ ಕಳೆದ ಮೂರು ದಿನಗಳಿಂದ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಸಹಯೋಗದೊಂದಿಗೆ ನಡೆಯಿತು. ಜೂ.10ರಿಂದ 12ರ ತನಕ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಕಾರ್ಯಾಗಾರದಲ್ಲಿ ಹಲವು ಮಾಹಿತಿ ವಿನಿಮಯ, ಚರ್ಚೆ, ವಿಷಯ ಮಂಡನೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಜೂನ್ 10ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಶ್ರೀ. ಶ್ರೀ ಕಾಲೇಜು ಆಫ್ ಆಯುರ್ವೇದಿಕ್ ಸೈನ್ಸ್ ಮತ್ತು ರಿಸರ್ಚ್ ಇದರ ಪಂಚ ಕರ್ಮ ವಿಭಾಗದ ಮುಖ್ಯಸ್ಥರು ಹಾಗೂ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು ಇದರ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷ ಡಾ.ಗಣೇಶ್ ಪುತ್ತೂರು ನೆರವೇರಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸಿ. ರಾಮಚಂದ್ರ ಭಟ್ , ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಡಿ.ವಿ. ಲೀಲಾಧರ್ , ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ಕವಿತಾ ಬಿ.ಎಂ. ಉಪಸ್ಥಿತರಿದ್ದರು.