- +91 73497 60202
- [email protected]
- November 22, 2024 8:07 PM
ನ್ಯೂಸ್ ನಾಟೌಟ್: ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಹಾಲಿನ (Nandini milk) ದರಗಳನ್ನು ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮುಂದೆ ಒಂದು ಲೀಟರ್ ಹಾಲಿನ ದರ ನಾಳೆಯಿಂದ(June 26) 44 ರೂ. ಆಗುತ್ತಿದೆ. ಈ ಮೂಲಕ ತೈಲ ಬೆಲೆ ಏರಿಕೆ (petrol price hike) ಬೆನ್ನಲ್ಲೇ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಷ್ಟು ದಿನ 1000 ml ಹಾಲು 42 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ನಾಳೆಯಿಂದ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ, ಅದರ ದರ 2 ರೂ.ಗಳನ್ನು ಸೇರಿಸಿ ನಾಳೆಯಿಂದ ಮಾರಾಟ ಮಾಡಲಾಗುತ್ತದೆ. ಒಟ್ಟು 1050 ml ಹಾಲಿನ ದರ 44 ರೂ. ಆಗುತ್ತಿದೆ ಎಂದು KMF ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ ಶುಭಂ ಹಾಲು 48ರಿಂದ 50 ರೂ ಸಮೃದ್ದಿ ಹಾಲು 51ರಿಂದ 53ರೂ ಶುಭಂ (ಟೋನ್ಡ್ ಹಾಲು) 49ರಿಂದ 51ರೂ ಸಂತೃಪ್ತಿ ಹಾಲು 55 ರಿಂದ 57 ರೂ ಶುಭಂ ಗೋಲ್ಡ್ ಹಾಲು 49ರಿಂದ 51ರೂ ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ ಮಾಡಲಾಗಿದೆ. ಅರ್ಧ ಲೀಟರ್ ಪ್ಯಾಕೇಟ್ ಹಾಲಿಗೂ 2 ರೂಪಾಯಿ ಏರಿಕೆ ಮಾಡಲಾಗುತ್ತಿದೆ. ಯಾಕೆಂದರೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ಗೂ 50 ml ಹಾಲನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತಿದೆ. ಪ್ರತಿಯೊಂದು ಪ್ಯಾಕೆಟ್‌ಗೂ 50 ML ಹಾಲು ಹೆಚ್ಚುವರಿಯಾಗಿ ಸೇರಿಸುವುದರಿಂದ 2 ರೂಪಾಯಿ ಏರಿಕೆ ಮಾಡಲಾಗುತ್ತಿದೆ ಎಂದು KMF ಸಮರ್ಥನೆ ಮಾಡಿಕೊಂಡಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ