- +91 73497 60202
- [email protected]
- November 22, 2024 7:53 PM
ನ್ಯೂಸ್ ನಾಟೌಟ್: ನನ್ನ ಪ್ರಕಾರ ಹಾಲಿನ ಬೆಲೆ ಇನ್ನೂ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಾಲಿನ ದರ (Milk Price)ಏರಿಕೆಯನ್ನು ಮತ್ತೆ ಸಮರ್ಥನೆ ಮಾಡಿಕೊಂಡ ಡಿಸಿಎಂ. ವಿರೋಧ ವ್ಯಕ್ತಪಡಿಸುವುದರಿಂದಲೇ ಬಿಜೆಪಿಯವರು ರೈತರ ವಿರೋಧಿಗಳು ಎಂಬುದು ಅರ್ಥ ಆಗುತ್ತದೆ. 2 ರೂ. ಜಾಸ್ತಿ ಅಗಿರೋದು ರೈತರಿಗೆ ತಲುಪುತ್ತದೆ. ರೈತರು ಎಷ್ಟು ಕಷ್ಟ, ಎಷ್ಟು ಸಂಕಷ್ಟದಲ್ಲಿ ಇದ್ದಾರೆ ಅಂತ ಬಿಜೆಪಿ ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ನನ್ನ ಪ್ರಕಾರ ಇನ್ನು ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ. ರೈತರನ್ನು ಕೇಳಲಿ ರೈತರ ಪರಿಸ್ಥಿತಿ ಏನು ಅಂತ. ಅವರು ಸಾಕಲು ಆಗದೇ ಹಸುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಬಿಜೆಪಿ ಅವರ ರೈತ ವಿರೋಧಿ ಧೋರಣೆ ಇದರಲ್ಲಿ ಎದ್ದು ಕಾಣ್ತಿದೆ. ಅವರೇ ಒತ್ತಾಯ ಮಾಡಬೇಕಿತ್ತು. ಅಮೂಲ್ ನಲ್ಲಿ ಎಷ್ಟು ಇದೆ?, ಮಹಾರಾಷ್ಟ್ರ ಬೇರೆ ರಾಜ್ಯದಲ್ಲಿ ಎಷ್ಟು ಇದೆ? ಅದನ್ನ ತಂದು ಮೊದಲು ನೋಡಲಿ. ಮೊದಲು ರೈತರನ್ನು ಬದುಕಿಸೋ ಕೆಲಸ ಬಿಜೆಪಿ ಅವರು ಮಾಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ