ನ್ಯೂಸ್ ನಾಟೌಟ್: ಮೂರು ಬಾರಿ ಬ್ರೆಜಿಲ್ನ ರಿಯೊ ಡಿ ಜನೈರೊ ಎಂಬಲ್ಲಿನ ಮೇಯರ್ ಆಗಿದ್ದ ಸೀಸರ್ ಮಾಯಾ ಎಂಬವರು ತನ್ನ ಪಕ್ಷದ ಸಭೆಯಲ್ಲಿ ಭಾಗಿಯಾದ ವೇಳೆ ಎಡವಟ್ಟು ಮಾಡಿಕೊಂಡಿದ್ದು, ಟಾಯ್ಲೆಟ್ ನಿಂದ ಭಾಗವಹಿಸಿದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ರಿಯೊ ಡಿ ಜನೈರೊದಲ್ಲಿನ ಸಿಟಿ ಹಾಲ್ನ ಮಾಜಿ ಮೇಯರ್ ಸೀಸರ್ ಮಾಯಾ ಇತರ ಕೌನ್ಸಿಲ್ ಸದಸ್ಯರೊಂದಿಗಿನ ಅಧಿವೇಶನಕ್ಕಾಗಿ ಆನ್ ಲೈನ್ ನಲ್ಲಿ ಜಾಯಿನ್ ಆಗಿದ್ದಾರೆ.
ಝೂಮ್ ಕಾಲ್ ಮೂಲಕ ಲಾಗಿನ್ ಆಗಿ ಅವರು ಸಭೆಗೆ ಜಾಯಿನ್ ಆಗಿದ್ದಾರೆ. ಸಭೆ ನಡೆಯುವಾಗ ಸೀಸರ್ ಟಾಯ್ಲೆಟ್ನಲ್ಲಿ ಕೂತಿದ್ದರು ಕಂಡಿದೆ. ಝೂಮ್ ಕಾಲ್ ನಲ್ಲಿದ್ದ ಅವರು ಕ್ಯಾಮರಾವನ್ನು ಕಾಲಿನತ್ತ ಇಟ್ಟಿದ್ದಾರೆ. ಇದರಿಂದ ಅವರು ಟಾಯ್ಲೆಟ್ ನಲ್ಲಿ ಕೂತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಗೊತ್ತಾದ ಕೂಡಲೇ ಸೀಸರ್ ಕ್ಯಾಮರಾವನ್ನು ತನ್ನ ಮುಖದತ್ತ ತಿರುಗಿಸಿದ್ದಾರೆ.
ಇದನ್ನು ನೋಡಿದ ಇತರೆ ಸದಸ್ಯರು ಮುಜುಗರಕ್ಕೆ ಒಳಗಾಗಿದ್ದಾರೆ. ಕ್ಯಾಮರಾವನ್ನು ಆಫ್ ಮಾಡಿ ಎಂದು ಕೌನ್ಸಿಲರ್ ಸೀಸರ್ ಅವರಿಗೆ ಹೇಳಿದ್ದಾರೆ. ಸೀಸರ್ ಅವರು ಅನಾರೋಗ್ಯದ ಕಾರಣದಿಂದ ಅಧಿವೇಶನದಲ್ಲಿ ಭಾಗಿಯಾಗಿಲ್ಲ. ಅವರು ಆಕಸ್ಮಿಕವಾಗಿ ಸಭೆಗೆ ಜಾಯಿನ್ ಆಗಿದ್ದರು ಎಂದು ಪ್ರಕಟಣೆ ತಿಳಿಸಿದೆ. ಇದರ ಬಳಿಕ ಮಾಜಿ ಮೇಯರ್ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ.
Click 👇