ನ್ಯೂಸ್ ನಾಟೌಟ್: ಈವರೆಗೆ ಖಾಸಗಿ ಕಂಪನಿಗಳು ಹಿಟ್ಟು ಮಾಡಿ ಮಾರಟ ಮಾಡುವ ಸಾಲಿಗೆ ಪೈಪೋಟಿ ನೀಡಲು ಈಗ ಕೆ.ಎಂ.ಎಫ್ ತಯಾರಿ ನಡೆಸುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾತ್ರವಲ್ಲದೆ ಸದ್ಯದಲ್ಲೇ ಈ ಹಿಟ್ಟು ಮಾರಾಟ ಉದ್ಯಮ ಶುರುಮಾಡಲು ಟೆಂಡರ್ ಕರೆಯಲು ನಿಗಮ ನಿರ್ಧರಿಸಿದೆ.
ಇದೀಗ ಈ ಪ್ರಾಬಲ್ಯಕ್ಕೆ ಕೊನೆ ಹಾಡಲು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸಜ್ಜಾಗಿದ್ದು, ಶೀಘ್ರದಲ್ಲೇ ನಂದಿನಿ ಬ್ರ್ಯಾಂಡ್ನಡಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಸ್ವತಃ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಎರಡು ತಿಂಗಳಲ್ಲಿ ನಂದಿನಿ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ನಗರದಲ್ಲಿನ ಇಡ್ಲಿ ಮತ್ತು ದೋಸೆ ಹಿಟ್ಟಿನ ಮಾರುಕಟ್ಟೆಯಲ್ಲಿ ಐಡಿ , ಅಸಲ್ ಮತ್ತು ಎಂಟಿಆರ್ನಂತಗ ಖಾಸಗಿ ಕಂಪನಿಗಳು ಪ್ರಾಬಲ್ಯ ಸಾಧಿಸಿವೆ. ಇದರ ಜೊತೆಗೆ ಸಣ್ಣ ಪುಟ್ಟ ಬ್ರ್ಯಾಂಡ್ ಹಾಗೂ ಬ್ರ್ಯಾಂಡ್ ಅಲ್ಲದ ಹಿಟ್ಟುಗಳೂ ದಿನ ನಿತ್ಯ ಮಾರಾಟವಾಗುತ್ತಿವೆ. ಈ ಸಾಲಿಗೀಗ ನಂದಿನಿಯೂ ಸೇರ್ಪಡೆಯಾಗಲಿದೆ.
Click 👇