ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ‘ರೆಡಿಯೋ ಡಯಾಗ್ನಿಸಿಸ್’ ವಿಭಾಗದ ವತಿಯಿಂದ ಬುಧವಾರ ‘Role of artificial intelligence in health care (Including Radiology) and what lies in store for us’ ವಿಷಯ ಬಗ್ಗೆ ವೈದ್ಯಕೀಯ ಅಧಿವೇಶನ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದ ಅವರು ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, “ಇಂತಹ ವೈದ್ಯಕೀಯ ಅಧಿವೇಶನಗಳಲ್ಲಿ ಹೊಸ ಹೊಸ ಸಂಶೋಧನೆಗಳ ಬಗ್ಗೆ ವೈದ್ಯರು ತಿಳಿದುಕೊಳ್ಳಲು ಸಹಾಯವಾಗುತ್ತದೆ’ ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ಸಲ್ಟೆಂಟ್ ರೇಡಿಯೊಲಜಿಸ್ಟ್ ಮತ್ತು ಪೀಡಿಯಾಟ್ರಿಕ್ ರೇಡಿಯಾಲಜಿಸ್ಟ್ ಮಿಡ್ ಅಂಡ್ ಸೌತ್ ಎಸ್ಸೆಕ್ಸ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ಗ್ರೂಪ್ ಎನ್.ಎಚ್.ಎಸ್. ಸೌತ್ ಈಸ್ಟ್ ಇಂಗ್ಲೆಂಡ್ ಇದರ ರೆಡಿಯಾಲಜಿ ವಿಭಾಗದ ವಿಕಿರಣ ಶಾಸ್ತ್ರದ ಹಿರಿಯ ಉಪನ್ಯಾಸಕ ಡಾ| ಶಿವಕುಮಾರ್ ಮಣಿಕ್ಕಂ ಆಗಮಿಸಿದ್ದರು.
ಅವರು ಸಮಾವೇಶದ ‘Role of artificial intelligence in health care (Including Radiology) and what lies in store for us’ ಎಂಬ ವಿಷಯದ ಬಗ್ಗೆ ವೈದ್ಯರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ವಿಷಯ ಮಂಡನೆ ಮಾಡಿದರು. AOLE(R) ಖಜಾಂಚಿ, ರೇಡಿಯೊಡಯಾಗ್ನೋಸಿಸ್ ವಿಭಾಗದ ಮುಖ್ಯಸ್ಥ ಡಾ | ಗೌತಮ್ ಗೌಡ ಎಲ್ಲರನ್ನೂ ಸ್ವಾಗತಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್, AOLE(R) ಕಾರ್ಯದರ್ಶಿ, RGUHS ಸೆನೆಟ್ ಮೆಂಬರ್ ಹಾಗೂ ರೇಡಿಯೊಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕಿ ಡಾ | ಐಶ್ವರ್ಯ ಕೆ ಸಿ ಹಾಗೂ ಮೆಡಿಕಲ್ ಸೂಪರಿಟೆಂಡೆಂಟ್ ಡಾ| ಸಿ. ರಾಮಚಂದ್ರ ಭಟ್ ಅತಿಥಿಗಳಾಗಿ ಆಗಮಿಸಿದ್ದರು. ತ್ರತೀಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ನಿಕ್ಷೇಪ್ ಚಂದ್ರಶೇಖರ್ ಪ್ರಾರ್ಥಿಸಿದರು. ಡಾ ಉತ್ತರೆ ಯು.ಎಸ್ ಹಾಗೂ ಡಾ | ಯಶ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಡಾ| ಮೇಘವರ್ಧನ್ ಗುಪ್ತ ಎಂ.ಎನ್ ಹಾಗೂ ಡಾ| ಶಾಂತ ಕುಮಾರ್ ರಸಪ್ರಶ್ನೆ ನಡೆಸಿಕೊಟ್ಟರು. ಡಾ| ಕಾವ್ಯ, ಪೀಡಿಯಾಟ್ರಿಕ್ ಎಮರ್ಜೆನ್ಸೀಸ್ ಅಂಡ್ ಮೊಡಾಲಿಟೀಸ್ ವಿಷಯ ಪ್ರಸ್ತುತ ಪಡಿಸಿದರು.
Click 👇