ನ್ಯೂಸ್ ನಾಟೌಟ್: ಬಸ್ನಲ್ಲಿ ಬಿಟ್ಟು ಹೋಗಿದ್ದ 2.5 ಲಕ್ಷ ರೂಪಾಯಿ ಹಣವನ್ನು KSRTC ಬಸ್ ಕಂಡಕ್ಟರ್ ಪ್ರಯಾಣಿಕನಿಗೆ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಗ್ರಾಮೀಣ ಘಟಕ 1ರಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕ ಹನುಮಂತರಾಯ ಹಾಗೂ ನಿರ್ವಾಹಕ ಮಂಜುನಾಥ ಬಸ್ನಲ್ಲಿ ದೊರೆತ ಹಣವನ್ನು ಪ್ರಯಾಣಿಕವಾಗಿ ಸೋಮಶೇಖರ್ ಪಾಟೀಲ್ ಎಂಬವರಿಗೆ ಮರಳಿಸಿದ್ದಾರೆ. ಹುಬ್ಬಳ್ಳಿಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಬಸ್ನಲ್ಲಿ ಸೋಮಶೇಖರ್ ಪಾಟೀಲ್ ಮಾನ್ವಿ ಪಟ್ಟಣದಿಂದ ರಾಯಚೂರಿಗೆ ಬರುತ್ತಿದ್ದರು.
ಆದರೆ ರಾಯಚೂರಿನಲ್ಲಿ ಇಳಿಯುವಾಗ ಹಣದ ಚೀಲವನ್ನು ಬಸ್ನಲ್ಲಿಯೇ ಬಿಟ್ಟು ಹೋಗಿದ್ದರು. ಬಸ್ ಹೈದರಾಬಾದ್ ತಲುಪಿದ ನಂತರ ಚೀಲವನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕರು ಅದನ್ನು ಪರಿಶೀಲಿಸಿದ್ದು, 2.5 ಲಕ್ಷ ನಗದು ಜೊತೆಯಲ್ಲಿ ಪ್ರಯಾಣಿಕನ ಬ್ಯಾಂಕ್ ಪಾಸ್ಬುಕ್ ಹಾಗೂ ಮೊಬೈಲ್ ನಂಬರ್ ಸಿಕ್ಕಿದೆ. ನಂತರ ಅವರು, ಸೋಮಶೇಖರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಹೈದರಾಬಾದ್ನಿಂದ ಇಂದು(ಜೂ.19) ಮರಳಿ ಹುಬ್ಬಳ್ಳಿ ಕಡೆ ತೆರಳುವಾಗ ಪ್ರಯಾಣಿಕನಿಗೆ ಹಣವನ್ನು ಮರಳಿಸಿ ಪ್ರಮಾಣಿಕತೆ ಮೆರೆದಿದ್ದಾರೆ ಎಂದು ವರದಿ ತಿಳಿಸಿದೆ.
Click 👇