ಬಾಲಕಿಗೆ ದೆವ್ವ ಹಿಡಿದಿದೆ ಎಂದು ಲೈಂಗಿಕ ಕಿರುಕುಳ ನೀಡಿದ ಮೌಲ್ವಿ..! ಬಾಲಕಿಯ ಅಣ್ಣ ಮತ್ತು ವೌಲ್ವಿಯ ಬಂಧನ..!

ನ್ಯೂಸ್ ನಾಟೌಟ್: ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮೌಲ್ವಿ ಸೇರಿ ಇಬ್ಬರನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೌಲ್ವಿ ಅಬ್ದುಲ್ ರೆಹಮಾನ್, ಬಾಲಕಿಯ ಅಣ್ಣ ಬಂಧಿತರು ಎಂದು ಗುರುತಿಸಲಾಗಿದೆ. ಬಾಲಕಿ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದಳು. ಬಾಲಕಿಗೆ ದೆವ್ವ ಹಿಡಿದಿದೆ, ಗಾಳಿ ಸೋಕಿದೆ ಎಂದು ಕುಟುಂಬದ ಸದಸ್ಯರಿಗೆ ಮೌಲ್ವಿ ನಂಬಿಸಿದ್ದಾನೆ ಎನ್ನಲಾಗಿದ್ದು. ದೈಹಿಕ ಸುಖ ನೀಡಿದರೆ ದೆವ್ವ ಬಿಡುತ್ತದೆ ಎಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. Click 👇