ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸುವ ಮುನ್ನ ಕಂಗನಾ ರಣಾವತ್ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಕುಲ್ವಿಂದರ್ ಕೌರ್ ಎಂಬಾಕೆ ಕೆನ್ನೆಗೆ ಬಾರಿಸಿದ್ದರು. ಇದೀಗ ಈ ಯೋಧೆಗೆ ತಮಿಳುನಾಡಿನಿಂದ ಚಿನ್ನದುಂಗುರ ಉಡುಗೊರೆ ನೀಡಲಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಘಟನೆಯಲ್ಲಿ ಕೆಲವರು ಮಹಿಳಾ ಉದ್ಯೋಗಿಯನ್ನು ಬೆಂಬಲಿಸುತ್ತಿದ್ದಾರೆ. ಈ ಘಟನೆ ಬಳಿಕ ಕುಲ್ವಿಂದರ್ ಹೆಸರು ದೇಶಾದ್ಯಂತ ಜನಪ್ರಿಯವಾಗುತ್ತಿದೆ. ಸಂಸದರೊಬ್ಬರಿಗೆ ಹೊಡೆದಿದ್ದಕ್ಕಾಗಿ ಹರಿಯಾಣ ಸರ್ಕಾರ ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ಆದರೆ, ಪಂಜಾಬ್ ರೈತರು ಕುಲ್ವಿಂದರ್ ಕೌರ್ ಬೆಂಬಲಕ್ಕೆ ನೀಡಿದ್ದಾರೆ. ಇದೀಗ ತಮಿಳುನಾಡಿನ ಪೆರಿಯಾರ್ ಅವರ ಅಭಿಮಾನಿಗಳ ಸಂಘವು ಕುಲ್ವಿಂದರ್ ಕೌರ್ ಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸಲು ನಿರ್ಧರಿಸಿದೆ.
ಕೊಯಮತ್ತೂರಿನ ತಂತೈ ಪೆರಿಯಾರ್ ದ್ರಾವಿಡರ್ ಕಳಗಂ (TPDK) 8 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಘೋಷಿಸಿದ್ದು, ಈ ಸಂಗತಿ ಇದೀಗ ಭಾರಿ ಸಂಚಲನ ಮೂಡಿಸಿದೆ. ಈ ಬಗ್ಗೆ ಟಿಪಿಡಿಕೆ ಪ್ರಧಾನ ಕಾರ್ಯದರ್ಶಿ ಕೋವೈ ರಾಮಕೃಷ್ಣನ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅವಮಾನಿಸಿದ ಕಂಗನಾ ರಣಾವತ್ ಗೆ ಹೊಡೆದ ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ನಾನು ಮೆಚ್ಚುತ್ತೇನೆ. ಈ ಸಂದರ್ಭದಲ್ಲಿ ನಾವು ಅವರಿಗೆ 8 ಗ್ರಾಂ ಚಿನ್ನದ ಉಂಗುರ ನೀಡಲು ನಿರ್ಧರಿಸಿದ್ದೇವೆ. ನಾವು ಪೆರಿಯಾರ್ ಅವರ ಮೂರ್ತಿಯೊಂದಿಗೆ ಉಂಗುರವನ್ನು ಕಳುಹಿಸುತ್ತೇವೆ ಎಂದಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿವೆ.
Click 👇