ನ್ಯೂಸ್ ನಾಟೌಟ್: ದಾನಗಳಲ್ಲಿ ಶ್ರೇಷ್ಠವಾದ ದಾನಗಳ ಪೈಕಿ ರಕ್ತದಾನವೂ ಒಂದು. ವ್ಯಕ್ತಿಯ ಜೀವ ಉಳಿಸೋಕೆ ತುರ್ತು ಸಂದರ್ಭದಲ್ಲಿ ರಕ್ತದಾನದ ಮಹತ್ವವೇನು ಅನ್ನೋದು ಹಲವು ಸಲ ನಿರೂಪಿತವಾಗಿದೆ. ರಕ್ತದಾನವು ಜಾತಿ, ಧರ್ಮವನ್ನ ಮೀರಿ ನಿಂತ ಸೇವೆಯಾಗಿದೆ. ಹೀಗಿರುವಾಗ ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಬಂದು ಇಲ್ಲಿ ರಕ್ತದಾನ ಮಾಡಿದ್ರು, ನಾಡಿಗೆ ಭಾವೈಕ್ಯದ ಸಂದೇಶ ಸಾರಿದರು. ಇದು ಜನಮೆಚ್ಚುಗೆಗೆ ಕಾರಣವಾಗಿದೆ. ಇದು ನಡೆದಿರುವುದು ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಅನ್ನೋದು ವಿಶೇಷ.
೪೦ ಮಂದಿ ಪುರುಷರು ಹಾಗೂ ೧೩ ಮಂದಿ ಮಹಿಳೆಯರು ರಕ್ತದಾನ ಮಾಡಿದರು. ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತಮ್ಮ ಸಂಘ ರಚನೆಯಾಗಿ ಐದು ವರ್ಷವಾದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು.
ಸಂಪಾಜೆ ಗ್ರಾಮ ಪಂಚಾಯತ್ , ಅಕ್ಷಯ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮಂಗಳೂರಿನ ಲೆಡಿಗೋಷನ್ ಆಸ್ಪತ್ರೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು. ಈ ಶಿಬಿರಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ. ಶಾಹೀದ್ ತೆಕ್ಕಿಲ್, ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಸುಧಾಕರ್ ರೈ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಕ್ಷಯ್ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಕರೀಂ ಕದ್ಕಾರ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್, ಸಂಪಾಜೆ ಗ್ರಾಮ ಪಂಚಾಯತ್ ಹಾಲಿ ಉಪಾಧ್ಯಕ್ಷ ಎಸ್ .ಕೆ ಹನೀಫ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.