ನ್ಯೂಸ್ ನಾಟೌಟ್: INDIA ಒಕ್ಕೂಟದ ಪಾಲುದಾರರೊಂದಿಗೆ ಮಾತನಾಡದೆ ಟಿಡಿಪಿ ಮತ್ತು ಜೆಡಿಯು ಜೊತೆಗಿನ ಮೈತ್ರಿ ಬಗ್ಗೆ ಉತ್ತರಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದಿಲ್ಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಮಂಗಳವಾರ ಸಂಜೆ ಚುನಾವಣಾ ಫಲಿತಾಂಶದ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸರಕಾರ ರಚನೆಗೆ ಮುಂದಾಗುವಿರಾ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮದು INDIA ಒಕ್ಕೂಟದ ಭಾಗವಾಗಿರುವ ಪಕ್ಷ. ನಮ್ಮ ಪಾಲುದಾರರ ಜೊತೆ ನಾನು ಮಾತನಾಡದೇ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಾಳೆ ನಮ್ಮ ಒಕ್ಕೂಟದ ಸಭೆ ನಿಗದಿಯಾಗಿದೆ. ಅವರ ಅಭಿಪ್ರಾಯಗಳನ್ನು ಕೇಳಿ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ನಿರೀಕ್ಷೆಯ ಸಾಧನೆ ಮಾಡಿಲ್ಲ, ಗೆದ್ದವರಿಗೆ ಅಭಿನಂದನೆಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 16 ರಿಂದ 20 ಸ್ಥಾನದ ನಿರೀಕ್ಷೆ ಇತ್ತು ಹಾದ್ರೆ ಹಾಗಾಗಲಿಲ್ಲ. ಈ ಬಾರಿ ೯ ಸ್ಥಾನ ಗೆದ್ದಿದ್ದೇವೆ ಹಿಂದಿಗಿಂತ ಉತ್ತಮವಾಗಿದೆ, ಚೇತರಿಕೆ ಕಂಡಿದೆ ಎಂದಿದ್ದಾರೆ.
Click 👇