ನ್ಯೂಸ್ ನಾಟೌಟ್ : ಮುಸ್ಲಿಮರ ಪವಿತ್ರ ಧಾರ್ಮಿಕ ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ದಾಖಲಾದ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಮೃತಪಟ್ಟ 645 ಹಜ್ ಯಾತ್ರಾರ್ತಿಗಳ ಪೈಕಿ 90 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಬೆಂಗಳೂರಿನ ಇಬ್ಬರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೃತರು ಬಕ್ರೀದ್ ಹಬ್ಬದ ಹಿನ್ನೆಲೆ ಹಜ್ ಯಾತ್ರೆ ಕೈಗೊಂಡಿದ್ದರು. ಮೆಕ್ಕಾಗಿಂತ 8 ಕಿಲೋಮೀಟರ್ ದೂರದ ಮೀನಾ ನಗರದಲ್ಲಿ ಬೆಂಗಳೂರಿನ ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಆರ್.ಟಿ ನಗರದ ಕೌಸರ್ ರುಕ್ಸಾನ (69) ಮತ್ತು ಫ್ರೆಝರ್ ಟೌನ್ನ ಮೊಹಮ್ಮದ್ ಇಲಿಯಾಸ್ (50) ಎಂದು ಗುರುತಿಸಲಾಗಿದೆ. ಮೆಕ್ಕಾದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ. ಈ ಬಾರಿ ಕರ್ನಾಟಕದಿಂದ 10,300 ಮಂದಿ ಹಜ್ ಯಾತ್ರೆಗೆ ತೆರಳಿದ್ದರು.
Click 👇