- +91 73497 60202
- [email protected]
- November 22, 2024 7:37 PM
ನ್ಯೂಸ್ ನಾಟೌಟ್: ಹಲವು ಹುಡುಗರು ಕ್ಷೌರದ ಅಂಗಡಿಯಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಳ್ಳಲು ಹೋದವನಿಗೆ ಅಂಗಡಿ ಮಾಲಿಕ ಫೇಸ್ ಕ್ರೀಮ್ ಗಳ ಜೊತೆ ತನ್ನ ಎಂಜಲಿನಿಂದ ಫೇಸ್ ಮಸಾಜ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್ ಮಸಾಜ್ ಮಾಡಿಕೊಂಡರೆ ಮುಖದಲ್ಲಿ ರಕ್ತಸಂಚಲನ ಚೆನ್ನಾಗಿ ಆಗುತ್ತದೆ. ದಣಿದ ಮುಖಕ್ಕೆ ರಿಲೀಫ್ ಆಗುತ್ತೆ ಎಂದು ಕೆಲವರು ದುಡ್ಡು ಕೊಟ್ಟು ಮಸಾಜ್ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿನ ಕ್ಷೌರದಂಗಡಿಗೆ ವ್ಯಕ್ತಿಯೊಬ್ಬ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿದ್ದಾನೆ. ಆದರೆ ಕ್ಷೌರದಂಗಡಿಯವನು ಕ್ರೀಂ, ಲೋಷನ್‌ಗಳನ್ನು ಹಚ್ಚಿ ಮುಖಕ್ಕೆ ಮಸಾಜ್ ಮಾಡುವುದರ ಬದಲು ಎಂಜಲು ಉಗಿದು ಮಸಾಜ್ ಮಾಡಿದ್ದಾನಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಮತ್ತು ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಅಮ್ಜದ್ ಎಂಬುದಾಗಿ ತಿಳಿದುಬಂದಿದೆ. @TruestoryUP ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ