ನ್ಯೂಸ್ ನಾಟೌಟ್: ಆನ್ ಲೈನ್ ಮೂಲಕ ಅಮಾಯಕರನ್ನು ವಂಚಿಸುವ ಪ್ರಕರಣಗಳು ಪ್ರತಿನಿತ್ಯವೂ ಹೆಚ್ಚಾಗುತ್ತಿದೆ. ಈ ವಿಚಾರಗಳು ಹಲವು ಸಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಜನರು ಮಾತ್ರ ಪದೇ ಪದೆ ಮೋಸ ಹೋಗುವುದು ನಿಲ್ಲುತ್ತಿಲ್ಲ ಅನ್ನೋದೇ ವಿಪರ್ಯಾಸ. ಇದೀಗ ಪುತ್ತೂರಿನಲ್ಲಿ ಉದ್ಯಮಿಯೊಬ್ಬರಿಗೆ ಇದೇ ರೀತಿ ವಂಚಕರು ಭಾರೀ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ್ ಪ್ರಭು (40 ವರ್ಷ) ಎಂಬವರು ಪುತ್ತೂರಿನ ನರಿಮೊಗರಿನ ಪುರುಷರ ಕಟ್ಟೆ ಎಂಬಲ್ಲಿ ಆಗ್ರೋ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ Unity Poly Barrels PVT Ltd Ashoka Nagar Shivaji Nagar Pune Maharsasthra ಎಂಬ ಹೆಸರಿನಿಂದ ಅಪರಿಚಿತರು ಉದ್ಯಮಿಯನ್ನು ಸಂಪರ್ಕಿಸಿದ್ದಾರೆ. ಆನ್ ಲೈನ್ ಮುಖಾಂತರ ಡ್ರಮ್ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದಾರೆ.
08.05.2024 ರಿಂದ ದಿನಾಂಕ: 10.05.2024 ರ ಮಧ್ಯಾಹ್ನ ಅವಧಿಯಲ್ಲಿ ಹಣವನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಹಾಕಿಸಿಕೊಂಡು ಈವರೆಗೆ ಡ್ರಮ್ ಮೆಟಿರಿಯಲ್ ಗಳನ್ನು ಕಳುಹಿಸಿಕೊಟ್ಟಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:58/2024, ಕಲಂ: 420 ಭಾ.ದಂ.ಸಂ ಮತ್ತು ಕಲಂ:-66(c),66(D))IT Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.