ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿರುವಾಗ ಹಲವು ಸ್ವಾರಸ್ಯಕರ ಘಟನೆಗಳು ಬೆಳಕಿಗೆ ಬಂದಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದ ಬಳಿ ದುಷ್ಕರ್ಮಿಗಳಿಂದ ವಾಮಾಚಾರ ನಡೆದಿದ ಬಗ್ಗೆ ಮಾಹಿತಿ ಲಭಿಸಿದೆ. ಮರದ ಪೊದೆಯಲ್ಲಿ ಎರಡು ಮೊಟ್ಟೆಗಳನ್ನು ಇಟ್ಟು ಕುಂಕುಮಗಳೆಲ್ಲ ಚೆಲ್ಲಿದ್ದು ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣೆಯ ಫಲಿತಾಂಶದಲ್ಲಿ ಗೆಲವು ಸಾಧಿಸಲು ಯಾರಾದರೂ ಹೀಗೆ ಮಾಡಿದ್ದರಾ ಎಂಬ ಅನುಮಾನ ಮೂಡಿದೆ. ಮೊಟ್ಟೆಯನ್ನು ತಂದಿಟ್ಟವರು ಯಾರು? ನಿಜಕ್ಕೂ ಅಲ್ಲಿ ವಾಮಾಚಾರ ನಡೆದಿದ್ಯಾ ಅಥವಾ ಮರದಡಿ ಕುಳಿತಾಗ ಮರೆತು ಬಿಟ್ಟು ಹೋಗಿದ್ದರಾ ಎಂಬುದು ತಿಳಿದು ಬಂದಿಲ್ಲ ಎನ್ನಲಾಗಿದೆ. ಅಂದಹಾಗೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ ಗೆಲುವು ಸಾಧಿಸಿದ್ದಾರೆ. ಐದನೆಯ ಬಾರಿಯೂ ಪ್ರಲ್ಹಾದ್ ಜೋಶಿ ಗೆಲುವು ಕಂಡಿದ್ದಾರೆ.
Click 👇