- +91 73497 60202
- [email protected]
- November 22, 2024 5:28 PM
ನ್ಯೂಸ್ ನಾಟೌಟ್: ವಿಡಿಯೋ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು‘ಪುರುಷತ್ವ ಪರೀಕ್ಷೆ’ಗೆ ಒಳಪಡಿಸಲು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಮುಂದಾಗಿದ್ದು, ಈ ಬಗ್ಗೆ ಸೋಮವಾರ ಪ್ರಾಥಮಿಕ ಪರೀಕ್ಷೆ ನಡೆಸಿದ್ದಾರೆ. ನಗರದ ಬೌರಿಂಗ್ ಆಸ್ಪತ್ರೆ ಆವರಣದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಜ್ವಲ್ ರವರ ವೈದ್ಯಕೀಯ ತಪಾಸಣೆ ನಡೆದಿದೆ. ಈ ವೇಳೆ ಪುರುಷತ್ವ ಪರೀಕ್ಷೆಗೆ ಅವರಿಂದ ವೀರ್ಯ, ಮರ್ಮಾಂಗದ ಕೂದಲು ಹಾಗೂ ರಕ್ತ ಸಂಗ್ರಹಿಸಲಾಗಿದೆ. ಮುಂದಿನ ಹಂತವಾಗಿ ಕೋರ್ಟ್ ಅನುಮತಿ ಪಡೆದು ಪ್ರಜ್ವಲ್ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗುವುದು. ಲೋಕಸಭಾ ಚುನಾವಣಾ ಫಲಿತಾಂಶ ತಿಳಿಯಲು ಟಿವಿ ವೀಕ್ಷಣೆಗೆ ಹಾಸನದ ಜೆಡಿಎಸ್ ಅಭ್ಯರ್ಥಿಯೂ ಆಗಿರುವ ಆರೋಪಿ ಪ್ರಜ್ವಲ್ ರೇವಣ್ಣ ಗೆ ಎಸ್‌ಐಟಿ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ ದಿನ ಟಿವಿ ವೀಕ್ಷಣೆಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪ್ರಜ್ವಲ್ ನಿವೇದಿಸಿಕೊಂಡಿದ್ದರು. ಈ ಮನವಿ ಹಿನ್ನಲೆಯಲ್ಲಿ ಎಸ್ಐಟಿ ಮುಖ್ಯಸ್ಥರ ಚೇಂಬರ್ ನಲ್ಲಿ ಅವರಿಗೆ ಕೆಲ ತಾಸು ಸುದ್ದಿವಾಹಿನಿಗಳ ವೀಕ್ಷಣೆಗೆ ಅಧಿಕಾರಿಗಳು ಅವಕಾಶ ಮಾಡಿಕೊಡಲಿದ್ದಾರೆ ಎನ್ನಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ