- +91 73497 60202
- [email protected]
- November 22, 2024 12:38 PM
ವರದಕ್ಷಿಣೆ ಕೊಡು, ಇಲ್ಲವಾದರೆ ತಮ್ಮನ ಜೊತೆ ಮಲಗು ಎಂದ ಪತಿ..! ಸಂತ್ರಸ್ತೆಯ ಸಹೋದರ ಬಿಚ್ಚಿಟ್ಟ ರಹಸ್ಯವೇನು..?
ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತವರು ಮನೆಯಿಂದ 5 ಲಕ್ಷ ವರದಕ್ಷಿಣೆ ತರಬೇಕು ಇಲ್ಲವಾದರೆ ತನ್ನ ತಮ್ಮನ ಜೊತೆ ಮಲಗುವಂತೆ ಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪತಿ 5 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ, ಇಲ್ಲದಿದ್ದರೆ ತನ್ನ ಸಹೋದರನೊಂದಿಗೆ ಲೈಂಗಿಕ ಸಂಬಂಧ ಹೊಂದು ಎಂದು ಕೆಲ ತಿಂಗಳುಗಳಿಂದ ಒತ್ತಡ ಹೇರಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಇದೀಗ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ ಆಕೆಯ ಪತಿ ಮತ್ತು ಪತಿಯ ತಮ್ಮನ ಮೇಲೆ ಕೇಸು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಸಂತ್ರಸ್ತೆಯ ಸಹೋದರನ ಪ್ರಕಾರ, “2023 ಜನವರಿ 15ರಂದು ತನ್ನ ಸಹೋದರಿಯ ವಿವಾಹ ಕಾನ್ಪುರದ ವ್ಯಕ್ತಿಯೊಂದಿಗೆ ನಡೆದಿದೆ. ಆದರೆ ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡಿದ್ದರೂ ಸಹ ಇದೀಗ ಕೆಲ ತಿಂಗಳುಗಳಿಂದ ಹೆಚ್ಚುವರಿಯಾಗಿ 5ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡಲು ಸಾಧ್ಯವಿಲ್ಲವೆಂದಾದರೆ ತನ್ನ ಸಹೋದರನೊಂದಿಗೆ ಮಲಗು ಎಂದು ಪತಿ ಒತ್ತಾಯಿಸಿದ್ದಾನೆ. ಇದಲ್ಲದೇ ಪತಿ ಮತ್ತು ಆತನ ಸಹೋದರ ಸೇರಿ ಆಕೆಯ ಹೊಟ್ಟೆಗೆ ಒದ್ದ ಕಾರಣ ಮೂರು ತಿಂಗಳ ಹಿಂದೆ ಗರ್ಭಪಾತವಾಗಿದೆ” ಎಂದು ತಿಳಿಸಿದ್ದಾನೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ