ದರ್ಶನ್ ಅಭಿಮಾನಿಯ ಮಾತು ಕೇಳಿ ಎಲೆಕ್ಟ್ರಿಕ್ ಡಿವೈಸ್ ತಂದು ಕೊಟ್ಟಿದ್ದ ರಾಜು ಅರೆಸ್ಟ್..! ಎಲೆಕ್ಟ್ರಿಕ್ ಮೆಗ್ಗರ್ ಯಂತ್ರವನ್ನು ವಶಪಡಿಸಿಕೊಂಡ ಪೊಲೀಸರು..!

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 9ನೇ ಆರೋಪಿ ರಾಜು ಅಲಿಯಾಸ್‌ ಧನರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶ‌ನ್‌ಗೂ ಧನರಾಜುಗೆ ನೇರ ನೇರ ಸಂಪರ್ಕ ಇರಲಿಲ್ಲ ಎನ್ನಲಾಗಿದೆ. ಒಟ್ಟಿಗೆ ಕೆಲಸ ಮಾಡುತ್ತಿದ್ದ ದರ್ಶನ್ ಅಭಿಮಾನಿಯ ಮಾತು ಕೇಳಿ ಎಲೆಕ್ಟ್ರಿಕ್ ಡಿವೈಸ್ ತಂದು ಸಹಾಯ ಮಾಡಿದ್ದಕ್ಕೆ ಈಗ ರಾಜು ಈ ಪ್ರಕರಣದ ಆರೋಪಿ ಪಟ್ಟಿ ಸೇರಿದ್ದಾನೆ. ನಂದೀಶ್‌ ಜೊತೆ ಬೆಂಗಳೂರಲ್ಲಿ ರಾಜು ಕೇಬಲ್ ಕೆಲಸ ಮಾಡಿಕೊಂಡಿದ್ದ. ಕೇಬಲ್ ಕೆಲಸ ಮಾಡುತ್ತಿದ್ದರಿಂದ ಎಲೆಕ್ಟ್ರಿಕಲ್ ಮೆಗ್ಗಾರ್ ಬಗ್ಗೆ ಆರೋಪಿಗಳು ತಿಳಿದುಕೊಂಡಿದ್ದರು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ನಂದೀಶ್‌ ಮತ್ತು ಇತರ ಆರೋಪಿಗಳು ಕರೆಂಟ್‌ ಶಾಕ್‌ ನೀಡುವ ಪ್ಲ್ಯಾನ್‌ ಮಾಡಿದ್ದರು. ಜೂನ್‌ 8 ರಂದು ಮೆಗ್ಗಾರ್ ಸಾಧನದ ಜೊತೆ ರಾಜುನನ್ನು ಪಟ್ಟಣಗೆರೆ ಶೆಡ್‌ಗೆ ನಂದೀಶ್ ಕರೆಸಿಕೊಂಡಿದ್ದ. ಪ್ಲ್ಯಾನ್‌ನಂತೆ ರಾಜುವಿನಿಂದ ಎಲೆಕ್ಟ್ರಿಕಲ್ ಮೆಗ್ಗಾರ್‌ ಯಂತ್ರವನ್ನು ನಂದೀಶ್ ತರಿಸಿಕೊಂಡಿದ್ದರು. ಆ ಮೆಗ್ಗಾರ್‌ ಯಂತ್ರವನ್ನು ಬಳಸಿ ರೇಣುಕಾಸ್ವಾಮಿಗೆ ಆರೋಪಿಗಳು ಕರೆಂಟ್ ಶಾಕ್ ನೀಡಿದ್ದರು ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜು ತಲೆ ಮರೆಸಿಕೊಂಡಿದ್ದ. ಈ ಪ್ರಕರಣದಲ್ಲಿ ರಾಜು ಪಾತ್ರ ಇರುವುದನ್ನು ಖಚಿತಪಡಿಸಿದ ಪೊಲೀಸರು ಎಫ್‌ಐಆರ್‌ನಲ್ಲಿ 9ನೇ ಆರೋಪಿಯನ್ನಾಗಿ ಸೇರಿಸಿದ್ದಾರೆ ಎನ್ನಲಾಗಿದೆ. ರಾಜು ಜೊತೆ ಎಲೆಕ್ಟ್ರಿಕಲ್ ಮೆಗ್ಗರ್ ಯಂತ್ರ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. Click 👇