- +91 73497 60202
- [email protected]
- November 22, 2024 7:28 AM
ದರ್ಶನ್ ಪ್ರಕರಣ: ಪಟ್ಟಣಗೆರೆ ಶೆಡ್ ಮಾಲಿಕ ಉಲ್ಟಾ ಹೊಡೆದದ್ದೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂಸ್ ನಾಟೌಟ್: ಪಟ್ಟಣಗೆರೆ ಜಯಣ್ಣ ಒಡೆತನದ ಶೆಡ್ ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ದರ್ಶನ್ ಸೇರಿದಂತೆ 19 ಮಂದಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈಗ ಶೆಡ್ ಮಾಲಿಕ ಉಲ್ಟಾ ಹೊಡೆದಿದ್ದು, ದರ್ಶನ್ ನನ್ನಿಂದ ಅನುಮತಿ ಪಡೆದಿಲ್ಲ ಎಂದಿದ್ದಾರೆ. ದರ್ಶನ್ ಶೆಡ್ಗೆ ಬಂದಿದ್ದು ತಮಗೆ ಗೊತ್ತೇ ಇಲ್ಲ ಎಂದು ಜಯಣ್ಣ ಹೇಳಿದ್ದಾರೆ ಎನ್ನಲಾಗಿದೆ. ‘ನಾನು ಶೆಡ್ನ ಬಾಡಿಗೆ ನೀಡಿದ್ದೇನೆ. ಅವರು ಹೋಗಿದ್ದು ನನಗೆ ಗೊತ್ತೇ ಇಲ್ಲ. ಕಿಶೋರ್ ಅವರು ಬಾಡಿಗೆದಾರ. ಕೀ ಅವನ ಬಳಿಯೇ ಇರುತ್ತದೆ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಚಾರಣೆ ವೇಳೆ ಪ್ರಾಪರ್ಟಿ ಬಗ್ಗೆ ಮಾತ್ರ ಕೇಳಿದ್ದಾರೆ’ ಎಂದು ಜಯಣ್ಣ ತಿಳಿಸಿದ್ದಾರೆ. ಜಯಣ್ಣ ಒಡೆತನದ ಶೆಡ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ತಾನೇ ಆ ಶೆಡ್ ಬಾಡಿಗೆ ನೀಡಿದ್ದೆ ಮತ್ತು ದರ್ಶನ್ ಮತ್ತು ಸ್ನೇಹಿತರು ಅಲ್ಲಿಗೆ ಆಗಾಗ ಬರುತ್ತಿದ್ದರು ಎಂದು ಈ ಹಿಂದೆ ಜಯಣ್ಣ ಹೇಳಿಕೆ ನೀಡಿದ್ದರು.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ