- +91 73497 60202
- [email protected]
- November 22, 2024 12:26 PM
ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆಗೈದ ಪ್ರಕರಣದಲ್ಲಿ ದರ್ಶನ್ ಮತ್ತು ಸಹಚರರು ಅರೆಸ್ಟ್ ಆದ ಬೆನ್ನಲ್ಲೇ ಸ್ಪೋಟಕ ಮಾಹಿತಿಗಳು ಹೊರಬರುತ್ತಿವೆ. ಈ ಕೊಲೆಯಾದ ಮೇಲೆ ಶವ ವಿಲೇವಾರಿಗೆ ೩೦ ಲಕ್ಷಕ್ಕೆ ಡೀಲ್ ನಡೆದಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಕೊಲೆಮಾಡಿ ಶವ ವಿಲೇವಾರಿ ಬಳಿಕ ಹಂತಕರಿಗೆ ನಡುಕ ಶುರುವಾಗಿತ್ತು. ಹೀಗಾಗಿ ಮೂವರಲ್ಲಿ ಶರಣಾಗುವಂತೆ ದರ್ಶನ್ ಸೂಚನೆ ನೀಡಿದ್ದರು. ಜೂನ್ 10 ರಂದು ಮೂವರು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿ ನಾವು ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಕೊಲೆ ಮಾಡಿ ಶರಣಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಮೂವರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿ ಯಾರ ಮಾಹಿತಿ ಮೇರೆಗೆ ಬಂದು ಶರಣಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಸಂಬಂಧವೇ ಇಲ್ಲದ ಒಂದೊಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಮತ್ತೆ ತನಿಖೆಗೆ ಇಳಿದು ಮೊಬೈಲ್ ಪರಿಶೀಲನೆ ನಡೆಸಿದಾಗ ದರ್ಶನ್‌ಗೆ ರಾತ್ರಿಯಿಡಿ ವಾಟ್ಸಪ್ ಕರೆ ಮಾಡಿರುವ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಈ ಪ್ರಕರಣದ ನೈಜ ಹಂತಕರ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಮೊದಲು ಶರಣಾಗತಿಯಾದ ಮೂವರು ಈ ಕೊಲೆ ಪ್ರಕರಣದಲ್ಲೇ ಇರಲಿಲ್ಲ. ಹಲ್ಲೆಯೂ ಮಾಡಿಲ್ಲ, ಕಿಡ್ನ್ಯಾಪ್ ಮಾಡಿಲ್ಲ. ಪೊಲೀಸರ ದಿಕ್ಕು ತಪ್ಪಿಸಲು ದರ್ಶನ್ ಈ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಈ ಮೂವರ ಜೊತೆ ಶವ ವಿಲೇವಾರಿ ಮಾಡಲು 30 ಲಕ್ಷ ರೂ. ಡೀಲ್ ನಡೆದಿತ್ತು. ಈಗ ಸುಳ್ಳು ಆರೋಪಿಗಳಾಗಿ ಶರಣಾಗಿದ್ದಕ್ಕೆ ಪೊಲೀಸರು ಪ್ರತ್ಯೇಕ ಸೆಕ್ಷನ್ ಅಡಿ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಜೊತೆಗೆ ದರ್ಶನ್ ಮತ್ತು ಸಹಚರರಿಗೆ ಕೊಲೆ, ಕಿಡ್ನಾಪ್ ಮತ್ತು ಸಾಕ್ಷಿ ನಾಶದ ಕೇಸ್ ಗಳನ್ನು ಹಾಕಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ