ದರ್ಶನ್ ಪ್ರಕರಣ: ಮಧ್ಯರಾತ್ರಿ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ರೇಣುಕಾಸ್ವಾಮಿ ಕೊಲೆ ಆರೋಪಿ..! ಮಗನ ಬಂಧನದ ವಿಷಯ ತಿಳಿದು ತಂದೆಗೆ ಹೃದಯಾಘಾತ..!

ನ್ಯೂಸ್ ನಾಟೌಟ್: ನಟ ದರ್ಶನ್ (Darshan Thoogudeepa) ಮತ್ತು ಗ್ಯಾಂಗ್ ನಲ್ಲಿ ಒಬ್ಬನಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಅನುಕುಮಾರ್ ಎಂಬಾತ ತನ್ನ​ ತಂದೆ ಚಂದ್ರಣ್ಣ (60) ಎಂಬವರ ಅಂತ್ಯಕ್ರಿಯೆಗೆ ಶನಿವಾರ(ಜೂ.15) ಮಧ್ಯರಾತ್ರಿ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ರುದ್ರಭೂಮಿಗೆ ಬಂದು ಕಾರ್ಯ ನೆರವೇರಿಸಿದ್ದಾನೆ. ತಂದೆಯ ಅಂತ್ಯಕ್ತಿಯೆಯಲ್ಲಿ ಆರೋಪಿ ಅನುಕುಮಾರ್​ ಭಾಗವಹಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನು ಕಂಡು ತಾಯಿ ಕಣ್ಣೀರಿಟ್ಟರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ7 ಅನುಕುಮಾರ್​ ಬಂಧಿತರಾಗಿದ್ದನ್ನು ತಿಳಿದು ಅವರ ತಂದೆ ಚಂದ್ರಣ್ಣ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳು ಎ4 ರಘು, ಎ6 ಜಗದೀಶ್, ಎ7 ಅನು, ಎ8 ರವಿಯನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆತಂದಿದ್ದಾರೆ. ಅನುಕುಮಾರ್​ ಹೊರತುಪಡಿಸಿ ಉಳಿದ ಆರೋಪಿಗಳನ್ನು ಖಾಸಗಿ ಹೋಟೆಲ್​​ನಲ್ಲಿ ಇರಿಸಲಾಗಿದೆ. ಅಂತ್ಯಕ್ರಿಯೆ ನೆರವೇರಿದ ಬಳಿಕ ಚಿತ್ರದುರ್ಗದಲ್ಲೂ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ ಎನ್ನಲಾಗಿದೆ. Click 👇