ನ್ಯೂಸ್ ನಾಟೌಟ್: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನೂತನವಾಗಿ ಆಯ್ಕೆಯಾದ 17 ಮಂದಿ ವಿಧಾನ ಪರಿಷತ್ ಸದಸ್ಯರು ಸೋಮವಾರ(June 24) ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ 17 ಜನ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ, ನೂತನ ಪರಿಷತ್ ಸದಸ್ಯರನ್ನ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು.ಈ ವೇಳೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದುಕೊಂಡರು.
ನಂತರ ನಡೆದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಹೆಚ್.ಕೆ ಪಾಟೀಲ್ ವೇದಿಕೆಯಲ್ಲಿದ್ದರು. ನೂತನ ಪರಿಷತ್ ಸದಸ್ಯರಾದ ಬೋಸರಾಜು, ಗೋವಿಂದರಾಜ್ (ಕಾಂಗ್ರೆಸ್), ಐವಾನ್ ಡಿಸೋಜ (ಕಾಂಗ್ರೆಸ್), ಜವರಾಯಿಗೌಡ (ಜೆಡಿಎಸ್), ಎಂ.ಜಿ. ಮೂಳೆ (ಬಿಜೆಪಿ), ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್), ಸಿ.ಟಿ ರವಿ (ಬಿಜೆಪಿ), ರವಿಕುಮಾರ್ (ಬಿಜೆಪಿ), ವಸಂತ್ ಕುಮಾರ್ (ಕಾಂಗ್ರೆಸ್), ಡಾ.ಚಂದ್ರಶೇಖರ ಪಾಟೀಲ್ (ಕಾಂಗ್ರೆಸ್ ಪದವೀಧರ ಕ್ಷೇತ್ರ) ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಜಯದೇವ್ ಗುತ್ತೇದಾರ್ (ಕಾಂಗ್ರೆಸ್) ಬುದ್ದ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಬಲ್ಕಿಸ್ ಬಾನು (ಕಾಂಗ್ರೆಸ್) ಅಲ್ಲಾ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
Click 👇