ನ್ಯೂಸ್ ನಾಟೌಟ್: ಕಾಡಿನ ಮಧ್ಯೆ ವಾಸವಿರುವ ಒಂಟಿ ಮಹಿಳೆಗೆ ಮನೆ ಕಟ್ಟಿ ಕೊಡುತ್ತಿರುವ ಮಾನವೀಯ ಕಾರ್ಯ ದೇವಚಳ್ಳ ಗ್ರಾಮದ ಮಾವಿನಗುಡ್ಲುವಿನಿಂದ ವರದಿಯಾಗಿದೆ.
ತಾನಿಲ್ಲ ತನ್ನವರಿಲ್ಲದೆ ಬದುಕುತ್ತಿರುವ ಲೀಲಾವತಿ ಎಂಬ ಮಹಿಳೆಯ ಮನೆ ಆಗಲೋ ಈಗಲೋ ಅನ್ನುವ ಸ್ಥಿತಿಯಲ್ಲಿ ಬೀಳುವ ಹಂತದಲ್ಲಿತ್ತು. ಈಗಂತೂ ಮಳೆಗಾಲ ಆಗಿರುವುದರಿಂದ ಯಾವಾಗ ಬೇಕಾದರೂ ಮನೆ ಕುಸಿದು ಬೀಳಬಹುದು ಅನ್ನುವ ಸ್ಥಿತಿಯಲ್ಲಿತ್ತು. ಇದನ್ನು ಅರಿತ ಸಹೃದಯಿ ದಾನಿಗಳೆಲ್ಲ ಸೇರಿ ಹಣ ಒಟ್ಟುಗೂಡಿಸಿ ಆಕೆಗೆ ಮನೆ ಕಟ್ಟಿಕೊಡುವ ನಿರ್ಧಾರ ತೆಗೆದುಕೊಂಡರು. ಅದರಂತೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶೌಚಾಲಯ ಗುಂಡಿಯ ಕೆಲಸವನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ಇದರ ವತಿಯಿಂದ ನಡೆಸಲಾಯಿತು. ಇದಕ್ಕೂ ಮೊದಲು ಈ ಮಹಿಳೆಯ ಕಥೆಯ ಬಗ್ಗೆ ಸುಳ್ಯದ ಯೂಟ್ಯೂಬರ್ ವಿಜೆ ವಿಖ್ಯಾತ್ ವಿಡಿಯೋ ಮಾಡಿ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.