- +91 73497 60202
- [email protected]
- November 22, 2024 9:41 PM
ನ್ಯೂಸ್ ನಾಟೌಟ್: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ನಟನನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸಲಾಗಿದೆ. ನಟ ದರ್ಶನ್ ನನ್ನು ಇಂದು(ಜೂ.11) ಮೈಸೂರಿನಲ್ಲಿ ಬಂಧನ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆಗಾರರು ಪೊಲೀಸರ ಮುಂದೆ ದರ್ಶನ್ ಪಾತ್ರ ಇರುವುದರ ಬಗ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು ಹತ್ತು ಜನರನ್ನು ಬಂಧಿಸಲಾಗಿದ್ದು, ಬಲವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಯ ತೀವ್ರತೆಗೆ ವ್ಯಕ್ತಿ ಮೃತಪಟ್ಟಿದ್ದಾರೆ. ಕಾಮಾಕ್ಷಿ ಪಾಳಯದ ಮೋರಿಯಲ್ಲಿ ಮೃತದೇಹ ಎಸೆಯಲಾಗಿತ್ತು. ಕಾಮಾಕ್ಷಿ ಪೊಲೀಸ್ ಸ್ಟೇಷನ್ ನಲ್ಲಿ ನಲ್ಲಿ ಕೇಸ್ ದಾಖಲಾಗಿದೆ. ಹಣಕಾಸಿನ ವಿಚಾರಕ್ಕೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ನಟ ದರ್ಶನ್ ಸಮ್ಮುಖದಲ್ಲೇ ಆರ್.ಆರ್ ನಗರದಲ್ಲಿರುವ ಶೆಡ್ ನಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಬಲವಾದ ಆಯುಧದಿಂದ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ದರ್ಶನ್ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿದ್ದಾರೆ. ಯಶಸ್ಸಿನ ಹಂತದಲ್ಲಿರುವಾಗಲೇ ದರ್ಶನ್ ಇಂತಹ ವಿವಾದದಲ್ಲಿ ಸಿಲುಕಿರುವುದು ವಿಶೇಷ. ರೇಣುಕಾ ಸ್ವಾಮಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿದ್ದ. ಪವಿತ್ರಾ ಯಾವುದೇ ಪೋಸ್ಟ್ ಹಾಕಿದರೂ ಅದಕ್ಕೆ ಆತ ಕಳೆದ ಒಂದು ತಿಂಗಳಿನಿಂದ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ಚಿತ್ರದುರ್ಗದ ಮೂಲದ ಆತನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶೇಡ್ ಒಂದರಲ್ಲಿ ದರ್ಶನ್ ಕಡೆಯವರು ಈತನಿಗೆ ಬಲವಾದ ಆಯುಧದಿಂದ ಹೊಡೆದಿದ್ದಾರೆ. ಆತ ಮೃತಪಟ್ಟ ಬಳಿಕ ಶವವನ್ನು ತೆಗೆದುಕೊಂಡು ಬಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೋರಿ ಒಂದಕ್ಕೆ ಎಸೆದಿದ್ದಾರೆ. ಜೂನ್ 9ರಂದು ಆತನ ಮೇಲೆ ಹಲ್ಲೆ ನಡೆದಿತ್ತು. ಮೃತದೇಹವನ್ನು ಶ್ವಾನಗಳು ನೀರಿನಿಂದ ಎಳೆಯುತ್ತಿದ್ದಾಗ ಪೊಲೀಸರಿಗೆ ಶವದ ಮಾಹಿತಿ ಸಿಕ್ಕುತ್ತದೆ. ಈ ಘಟನೆ ನಡೆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸುತ್ತಾರೆ. ಮೂವರು ಬಂದು ಹಣಕಾಸಿನ ವಿಚಾರದಲ್ಲಿ ವಿವಾದಗೊಂಡು ಆತನನ್ನು ಕೊಲೆ ಮಾಡಿದೆವು ಎಂದು ಮೂವರು ಶರಣಾಗುತ್ತಾರೆ. ಆದರೆ ಪೊಲೀಸರಿಗೆ ಎಲ್ಲೋ ಅನುಮಾನ ಬಂದು ಹೆಚ್ಚಿನ ತನಿಖೆ ನಡೆದಾಗ ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಪೊಲೀಸರಿಂದ ದರ್ಶನ್ ಅವರನ್ನು ಬಂಧಿಸಲಾಗಿದೆ. ವಿಜಯ ನಗರ ಎಸಿಪಿ ದಾಳಿಯಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ