ನ್ಯೂಸ್ ನಾಟೌಟ್ : ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನದಿಂದ (cardiac arrest) ಹಠಾತ್ ಸಾವನ್ನಪ್ಪಿರುವ ಘಟನೆ ಜೂ. 5ರಂದು ಹೈದರಾಬಾದ್ನ ಮೇಡ್ಚಲ್ ಮಲ್ಕಾಜ್ಗಿರಿ ಜಿಲ್ಲೆಯ ಸತ್ಯನಾರಾಯಣ ಕಾಲೋನಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನಕಲಕುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೆಡಿಕಲ್ ಸ್ಟೋರ್ ನ ಬಿಲ್ಲಿಂಗ್ ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬಾತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಸಮೀಪದಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆಘಾತದಿಂದ ಅವನತ್ತ ಧಾವಿಸಿ ಆತನನ್ನು ಬದುಕಿಸಲು ಯತ್ನಿಸಿದ್ದಾನೆ. ಆದರೂ ಪ್ರಯೋಜನವಾಗಲಿಲ್ಲ. ಆದರೆ, ಅಲ್ಲೇ ಔಷಧಿ ಖರೀದಿಗೆ ಬಂದವರು ಈತನ ಒದ್ದಾಟ ನೋಡಿಯೂ ಸಹಾಯ ಮಾಡದೆ ತೆರಳಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಹಠಾತ್ ಹೃದಯಾಘಾತ ಮತ್ತು ಹೃದಯ ಸ್ತಂಭನ ಅಚ್ಚರಿ ಪಡುವಂತೆ ಮಾಡಿದೆ.
Click 👇