ನ್ಯೂಸ್ ನಾಟೌಟ್ : ಚಿತ್ರದುರ್ಗದ ವಿಆರ್ಎಸ್ ಬಡಾವಣೆಯಲ್ಲಿರುವ ಹತ್ಯೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ಜೂ.18)ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ರೇಣುಕಾಸ್ವಾಮಿ ಪತ್ನಿ ಹಾಗೂ ಅವರ ತಂದೆ-ತಾಯಿಯರಿಗೆ ಧೈರ್ಯ ತುಂಬಿದ್ದಾರೆ, ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ಅತ್ಯುಗ್ರವಾಗಿ ಖಂಡಿಸುವ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣ ಮಾಹಿತಿ ಹಾಗೂ ಪರಸ್ಪರ ಸ್ನೇಹ ಬೆಸೆಯುವ ತಾಣವಾಗಬೇಕು ಆದರೆ ದ್ವೇಷ, ಕೊಲೆ, ವಿಕೃತ ಹರಡುವ ಮಟ್ಟಕ್ಕೆ ವಿಸ್ತಾರಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸುವವರೆಗೂ ಯಾವ ಹಸ್ತಕ್ಷೇಪಕ್ಕೂ ಪೊಲೀಸರು ಮಣಿಯಬಾರದು, ರೇಣುಕಾ ಸ್ವಾಮಿ ಕೊಲೆಗೆ ನ್ಯಾಯ ಸಿಗಲೇಬೇಕು, ತಪ್ಪಿತಸ್ಥರು ಎಷ್ಟೇ ದೊಡ್ಡವರಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
Click 👇