ನ್ಯೂಸ್ ನಾಟೌಟ್: ಸುಳ್ಯದ ಕಾಂತಮಂಗಲದ ಶಾಲಾ ವಠಾರದಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವ ಪ್ರಕರಣದ ತನಿಖೆ ಚುರುಕಾಗಿದೆ. ಈ ಕೊಲೆಯನ್ನು ಯಾರು ಮಾಡಿರಬಹುದು..? ಮತ್ತು ಯಾಕಾಗಿ ಮಾಡಿರಬಹುದು..? ಅನ್ನುವುದರ ಬಗ್ಗೆ ಇದೀಗ ಪೊಲೀಸ್ ತನಿಖೆ ಬಿರುಸುಪಡೆದುಕೊಂಡಿದೆ.
ಸಾವಿಗೀಡಾದವರನ್ನು ಕೊಡಗು ಜಿಲ್ಲೆಯ ವಿರಾಜಪೇಟೆಯ ವಸಂತ ಎಂದು ಗುರುತಿಸಲಾಗಿದೆ. ಇವರು ಚೆಂಬು ಗ್ರಾಮದ ಕುದುರೆಪಾಯದಿಂದ ಮದುವೆಯಾಗಿದ್ದರು. ಕಡಬದ ಕಾಣಿಯೂರಿನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರವಷ್ಟೇ ರಜೆಯ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಆಗಮಿಸಿದ್ದರು. ಹಾಗೆ ಬಂದವರು ಹೀಗೆ ಹತ್ಯೆಯಾಗಿದ್ದು ಹೇಗೆ..? ಕಾಂತಮಂಗಲದ ತನಕ ಅವರು ಬಂದಿದ್ದು ಹೇಗೆ..? ಅನ್ನುವುದರ ಕುರಿತು ತನಿಖೆ ನಡೆಯುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಶ್ವಾನ ದಳ ಇದೀಗ ಸ್ಥಳಕ್ಕೆ ಆಗಮಿಸಿದೆ. ಪ್ರಕರಣದ ಜಾಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಡಿ.ಎಸ್, ಪುತ್ತೂರು ಡಿವೈಎಸ್ ಪಿ ಅರುಣ್ ನಾಗೇಗೌಡ ಮತ್ತು ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ್ ಕೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Click 👇