ನ್ಯೂಸ್ ನಾಟೌಟ್: ಮೊಬೈಲ್ ಬಳಕೆದಾರರಿಗೆ ಜಿಯೋ ಬೆನ್ನಲ್ಲೇ ಇದೀಗ ಏರ್ ಟೆಲ್ ಕೂಡಾ ಶಾಕ್ ನೀಡಿದ್ದು, ಶೇ. 10-21 ರಷ್ಟು ಮೊಬೈಲ್ ರಿಜಾರ್ಜ್ ದರವನ್ನು ಏರಿಕೆ ಮಾಡುವುದಾಗಿ ಭಾರತಿ ಏರ್ ಟೆಲ್ ಘೋಷಣೆ ಮಾಡಿದೆ.
ಮೊಬೈಲ್ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ನಿನ್ನೆ(ಜೂ.27) ರಿಚಾರ್ಜ್ ದರ ಹೆಚ್ಚಿಸಿತ್ತು. ಇದರ ಬಾರತಿ ಏರ್ ಟೆಲ್ ಕೂಡಾ ರಿಚಾರ್ಜ್ ದರವನ್ನು ಶುಕ್ರವಾರ(ಜೂ.28) ಹೆಚ್ಚಿಸಿದೆ. ಜುಲೈ 3ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಸುನಿಲ್ ಭಾರ್ತಿ ಮಿತ್ತಲ್ ಅವರ ದೂರ ಸಂಪರ್ಕ ಸಂಸ್ಥೆ ಹೇಳಿದೆ. 5G ಸೇವೆಗಳಿಗೆ ಭಾರಿ ಹೂಡಿಕೆ ಕಾರಣದಿಂದ ಪ್ರತಿ ಬಳಕೆದಾರರ ಮೇಲೆ ಆ ಮೊತ್ತವನ್ನು ವಿಧಿಸಿದೆ ಎನ್ನಲಾಗಿದೆ.
Click 👇