ನ್ಯೂಸ್ ನಾಟೌಟ್: ಗುತ್ತಿಗಾರಿನಲ್ಲಿ ವಿಷದ ಹಾವು ಕಚ್ಚಿ ಮಹಿಳೆ ಸಾವಿಗೀಡಾಗಿರುವ ಘಟನೆ ಮಾಸುವ ಮೊದಲೇ ಅಂತಹುದೇ ಮತ್ತೊಂದು ಪ್ರಕರಣ ಬೆಳ್ಳಾರೆಯಿಂದ ಈಗ ವರದಿಯಾಗಿದೆ.
ನಿನ್ನೆ ( ಜೂ.12) 42 ವರ್ಷದ ಸುಶೀಲಾ ಎಂಬ ಮಹಿಳೆಗೆ ಹಾವು ಕಚ್ಚಿದೆ. ಬೂಡು ಎಂಬಲ್ಲಿ ಮಹಿಳೆ ಕೊಟ್ಟಿಗೆ ಬಳಿ ಇದ್ದರು. ಈ ವೇಳೆ ಹಾವು ಕಚ್ಚಿದೆ. ಅಸ್ವಸ್ಥಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಶವವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಸದ್ಯ ಮಳೆಗಾಲ ಆರಂಭವಾಗಿದ್ದು ಇಂತಹ ಸಂದರ್ಭ ದಲ್ಲಿ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ವಿಷ ಜಂತುಗಳಿಂದ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ.