ನ್ಯೂಸ್ ನಾಟೌಟ್: ಅರಂಬೂರು ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಗುದ್ದಿದ ಬೈಕ್ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ನಿನ್ನೆ (ಜೂ.9) ರಾತ್ರಿ ಪಾದಾಚಾರಿಗೆ ಬೈಕ್ ವೊಂದು ಸುಳ್ಯ ಸಮೀಪದ ಅರಂಬೂರು ಬಳಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಪಾದಾಚಾರಿಗೆ ಗಾಯಗಳಾಗಿದ್ದವು. ತಕ್ಷಣ ಅಲ್ಲಿ ಜನ ಸೇರಿದ್ದರು.
“ನೀವು ಮುಂದೆ ಹೋಗಿ ನಾನು ನಿಮ್ಮ ಹಿಂದಿನಿಂದಲೇ ಆಸ್ಪತ್ರೆಗೆ ಬರುತ್ತೇನೆ” ಎಂದು ಬೈಕ್ ಸವಾರ ಹೇಳಿದ್ದ. ಹೀಗಾಗಿ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಇದುವರೆಗೆ ಆಸ್ಪತ್ರೆಗೆ ಬಂದಿಲ್ಲ. ಗಾಯಾಳು ಚೇತರಿಸಿಕೊಂಡಿದ್ದಾರೆ. ಆದರೆ ಅಪಘಾತ ಮಾಡಿದವ ಮಾತ್ರ ಈಗ ಅನ್ಯಗ್ರಹ ಸೇರಿದನೇ..? ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬೈಕ್ ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.
Click 👇