- +91 73497 60202
- [email protected]
- November 22, 2024 12:17 PM
ನ್ಯೂಸ್ ನಾಟೌಟ್: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಡಿಎಂಕೆ ಕಾರ್ಯಕರ್ತರು ಅಣ್ಣಾಮಲೈ ಫೋಟೋ ಹಾಕಿ ಮೇಕೆಯನ್ನು ನಡು ರಸ್ತೆಯಲ್ಲಿ ಕೊಂದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಣ್ಣಾಮಲೈ ಫೋಟೋವನ್ನು ಮೇಕೆ ಕತ್ತಿಗೆ ನೇತು ಹಾಕಿ ನಡು ರಸ್ತೆಗೆ ತಂದು ಒಂದೇ ಏಟಿಗೆ ತಲೆಯನ್ನು ಕತ್ತರಿಸಿ ಡಿಎಂಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಮುಖ್ಯಮಂತ್ರಿ ಸ್ಟಾಲಿನ್ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಮೂಲಭೂತ ಸಭ್ಯತೆಯನ್ನು ಪ್ರದರ್ಶಿಸಿಲು ಹೇಳಿ. ತಮಿಳುನಾಡು ಪೊಲೀಸರು ವೀಕ್ಷಕರಾಗುವ ಬದಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 1,18,068 ಮತಗಳ ಅಂತರದಿಂದ ಸೋತಿದ್ದರು. ಡಿಎಂಕೆ ಗಣಪತಿ ರಾಜ್‌ಕುಮಾರ್ 5,68,200 ಮತಗಳನ್ನು ಪಡೆದರೆ ಅಣ್ಣಾಮಲೈ 4,50,132 ಮತಗಳನ್ನು ಗಳಿಸಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ