ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಗಾಗಿ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಕೈಗೊಂಡು ಇಂಡಿಯಾ ಒಕ್ಕೂಟ ರಚನೆಯಾಗಿತ್ತು. ಆದರೆ, ಮತದಾರರು ಯಾವ ಪಕ್ಷಕ್ಕೂ ಸರಿಯಾದ ಬಹುಮತ ನೀಡದ ಕಾರಣ ಮಿತ್ರ ಪಕ್ಷಗಳನ್ನು ಮನವೊಲಿಸಿ ಆಡಳಿತ ಉಳಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾವೆ. ಈ ನಡುವೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಆಮ್ ಆದ್ಮಿ ಪಾರ್ಟಿ ಶಾಕ್ ನೀಡಿದೆ.
ಇಂಡಿಯಾ ಮೈತ್ರಿ ಪಾಲುದಾರರಾಗಿ ಬೆಂಬಲ ನೀಡಿದ್ದ ಆಮ್ ಆದ್ಮಿ ಪಕ್ಷ ಮೈತ್ರಿ ಮುರಿದುಕೊಳ್ಳುವ ಮಾತನಾಡುತ್ತಿದೆ. “ಲೋಕಸಭಾ ಚುನಾವಣೆಗಾಗಿ ಮಾಡಿದ ಮೈತ್ರಿ ಇದಾಗಿದ್ದು, ಲೋಕಸಭಾ ಚುನಾವಣೆ ಹೋರಾಟದ ದೃಷ್ಟಿಯಿಂದ ಆಪ್ ಇಂಡಿಯಾ ಮೈತ್ರಿಗೆ ಸಂಪೂರ್ಣ ಬೆಂಬಲ ನೀಡಿ ಪಾಲುದಾರರಾಗಿತ್ತು. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ. ಹೀಗಾಗಿ ಇನ್ನು ಆಪ್ಗೆ ಮೈತ್ರಿ ಅವಶ್ಯಕತೆ ಇಲ್ಲ ಎಂದು ಆಪ್ ಸಚಿವ ಗೋಪಾಲ್ ರೈ ಹೇಳಿದ್ದಾರೆ.
2025ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿ ಚುನಾವಣೆಗೆ ಆಪ್ ಯಾವುದೇ ಮೈತ್ರಿ ಇಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಗೋಪಾಲ್ ರೈ ಸ್ಪಷ್ಟಪಡಿಸಿದ್ದರೆ. ಪಂಜಾಬ್ ನಲ್ಲಿ ವಿಧಾನಸಭೆ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಬಳಿಕ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಆಪ್ 3 ಸ್ಥಾನ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
Click 👇