ನ್ಯೂಸ್ ನಾಟೌಟ್: ಏರ್ ಇಂಡಿಯಾ ಜೆಟ್ ಟೇಕ್ ಆಫ್ ಆಗುತ್ತಿದ್ದ ಮುಂಬೈ ವಿಮಾನ ನಿಲ್ದಾಣದ ರನ್ ವೇಯಲ್ಲಿ ಅದೇ ಸಮಯ ಇಂಡಿಗೋ ವಿಮಾನವು ಲ್ಯಾಂಡ್ ಆಗಿದ್ದು, ಕೆಲವೇ ಅಂತರದಲ್ಲಿ ನೂರಾರು ವಿಮಾನ ಪ್ರಯಾಣಿಕರು ಭಾರೀ ಅನಾಹುತದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ವಾಯುಯಾನ ನಿಯಮಿತ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆ ವೇಳೆ ಕರ್ತವ್ಯದಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ಪದಚ್ಯುತಗೊಳಿಸಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಘಟನೆ ಶನಿವಾರ 8 ಕ್ಕೆ ನಡೆದಿದೆ ಎನ್ನಲಾಗಿದೆ.
Click 👇