ನ್ಯೂಸ್ ನಾಟೌಟ್ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಗ್ಗೆ ನಿರ್ಮಾಪಕ ಉಮಾಪತಿ ಮಾತನಾಡಿದ್ದು, ದರ್ಶನ್ ಮೇಲಿನ ಕೋಪ ಸಿಟ್ಟನ್ನು ಹೊರಹಾಕಿದ್ದಾರೆ. (Umapati and Darshan Thoogudeepa)
“ಯಾರು ಅಪರಾಧ ಮಾಡಿದರೂ ತಪ್ಪು ತಪ್ಪೇ. ನನ್ನದೇ ಆದ ಸ್ನೇಹಿತರ ಬಳಗದಿಂದ ಒಂದಿಷ್ಟು ಮಾಹಿತಿ ಬಂತು. ಆತ(ರೇಣುಕಾಸ್ವಾಮಿ) ಎಷ್ಟೇ ಬೇಡಿಕೊಂಡರೂ ಇವರು ಬಿಡಲಿಲ್ಲ ಅಂತಾ. ಈತನನ್ನು ಸಾಯಿಸಬೇಕು ಅಂತಾನೇ ಕರೆದುಕೊಂಡು ಬಂದ್ರಾ ಗೊತ್ತಿಲ್ಲ. ನನ್ನ ತಂದೆ ನನಗೆ ಎಲ್ಲಾ ರೀತಿಯಲ್ಲೂ ದಾರಿ ತೋರಿಸದರೂ ಕೂಡ ನಮಗೆ ಜೀವನ ಕಟ್ಟಿಕೊಳ್ಳಲು ಕಷ್ಟ ಆಯಿತು. ದುಡ್ಡಿದ್ದರೂ ದಾರಿ ಗೊತ್ತಾಗುತ್ತಿರಲಿಲ್ಲ. ಆದರೆ ರೇಣುಕಾಸ್ವಾಮಿಯ ಇನ್ನು ಹುಟ್ಟುವ ಆ ಮಗುಗೆ ನಿನ್ನ ತಂದೆ ಹೀಗೆ ಸತ್ತರು ಅಂದರೆ ಎಷ್ಟು ನೋವಾಗುತ್ತದೆ ಎಂದು ಹೇಳಿದ್ದಾರೆ.
ಅವರೆಲ್ಲಾ ಮುಗ್ಧ ಜನ. ಅವನಿಗೂ ಗೊತ್ತಿರಲಿಲ್ಲ ಹೀಗೆಲ್ಲಾ ಆಗುತ್ತದೆ ಅಂತಾ. ತಪ್ಪು ಯಾರೇ ಮಾಡಿದರೂ ತಪ್ಪು ತಪ್ಪೇ. ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು ಎದೆ ಬಗೆದು ತೋರಿಸುತ್ತೇನೆ ಅನ್ನುವುದೆಲ್ಲಾ ಈಗಿಲ್ಲ. ಶ್ರೀರಾಮನನ್ನು ತೋರಿಸುವ ಆಂಜನೇಯ ಈಗಿಲ್ಲ. ಆ ಕಾಲನೂ ಇವತ್ತಲ್ಲ ಎಂದು ಹೇಳಿದ್ದಾರೆ. ನನಗೆ ಯಾರೋ ಒಬ್ಬರು ಹೇಳುತ್ತಿದ್ದರು. ನೋಡಿ ಸ್ವಾಮಿ ಇವತ್ತಿನ ಕಾಲ ಹೇಂಗೆ ಅಂದರೆ, ದೇವರಂತಹ ಮನುಷ್ಯ ನಾಯಿಯಂತಹ ಬುದ್ಧಿ ಅಂತಾ ಹೇಳುತ್ತಿದ್ದರು ಅದು ಈಗ ಯಾರಿಗೆ ಅನ್ವಯವಾಗುತ್ತದೆ ಎಂದು ಗೊತ್ತಾಗುತ್ತಿದೆ.
ತಪ್ಪು ಮಾಡಿರೋರು ಕಾನೂನಿಕ ಚೌಕಟ್ಟಿನಲ್ಲಿ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ಅದೇ ರೀತಿ ಎಲ್ಲಾ ಧ್ವನಿ ಎತ್ತಿ. ನನ್ನ ಸೆಟ್ ನಲ್ಲೂ ಆ ಮನುಷ್ಯ(ದರ್ಶನ್) ಎರಡು ಮೂರು ಸಲ ಯಾರಿಗೋ ಹೊಡೆದರು. ನಾನು ಬೇಡ ಬಿಟ್ಟಾಕಿ ಅಂದೆ. ನಾಳೆ ದಿನ ಅವನು ಸಿನಿಮಾ ಮಾಡಲ್ಲ ಎಂದರೆ ನನ್ನ ಪರಿಸ್ಥಿತಿ ಏನು ಎಂದು ಎಲ್ಲವನ್ನು ಅಂದು ಸುಮ್ಮನೆ ನಿಲ್ಲಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
Click 👇