ನ್ಯೂಸ್ ನಾಟೌಟ್: ಹಾಸನ ಪೆನ್ ಡ್ರೈವ್ ವಿಷಯ ಕಗಂಟಾಗಿ ಇನ್ನೂ ಪ್ರಜ್ವಲ್ ಭಾರತಕ್ಕೆ ಬಾರದೆ ಎಸ್.ಐ.ಟಿ ಯನ್ನು ಆಟವಾಡಿಸುತ್ತಿದ್ದಾರೆ ಎಂಬ ಸಂಶಯ ಮೂಡಿದೆ. ಈ ನಡುವೆ ಮತ್ತೊಂದು ಬೆಳವಣಿಗೆ ನೆಡೆದಿದ್ದು, ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್(X) ಖಾತೆಯಲ್ಲಿನ ಬ್ಲೂ ಟಿಕ್ ಮಾರ್ಕ್ ಕಳೆದುಕೊಂಡಿದ್ದಾರೆ.
ವೆರಿಫೈಡ್ ಅಕೌಂಟ್ ಎಂದು ಬಳಕೆದಾರರಿಗೆ ಕಂಪೆನಿಯು ಬ್ಲೂ ಟಿಕ್ ನೀಡುತ್ತದೆ. ಕೆಲವು ದಿನಗಳ ಹಿಂದಷ್ಟೇ ಇದ್ದ ಬ್ಲೂ ಟಿಕ್ ಮಾರ್ಕ್, ಇದೀಗ ಪ್ರಜ್ವಲ್ ಖಾತೆಯಲ್ಲಿ ಕಾಣಿಸುತ್ತಿಲ್ಲ. ವೆರಿಫೈಡ್ ಅಕೌಂಟ್ ಸ್ಟೇಟಸ್ನಿಂದ ಪ್ರಜ್ವಲ್ ಖಾತೆ ಹೊರಬಿದ್ದಿದ್ದು, ಎಕ್ಸ್ ಕಂಪೆನಿಯು ಅಧಿಕೃತ ಖಾತೆಯನ್ನು ಅಮಾನ್ಯ ಮಾಡಲು ಯಾವುದೇ ಕಾರಣ ನೀಡಿಲ್ಲ. ಎಕ್ಸ್ಗಿಂತ ಮುಂಚೆ ಟ್ವಿಟರ್ ಖಾತೆ ಬಳಸುವಾಗ ಅಧಿಕೃತ ಹಾಗೂ ಗಣ್ಯ ವ್ಯಕ್ತಿಗಳಿಗೆ ಬ್ಲೂ ಟಿಕ್ ಮಾರ್ಕ್ ನೀಡಲಾಗುತ್ತಿತ್ತು. ಇದೇ ಮಾದರಿಯಲ್ಲಿ ಪ್ರಜ್ವಲ್ ರೇವಣ್ಣಗೂ ನೀಡಿತ್ತು. ಇದೀಗ ಕಾರಣ ನೀಡದೆ ರದ್ದು ಮಾಡಲಾಗಿದೆ.
ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಹಲವು ಬದಲಾವಣೆ ತಂದಿದ್ದಾರೆ. ಟ್ವಿಟರ್ ಬದಲಿಗೆ ಎಕ್ಸ್ ಎಂದು ನಾಮಕರಣ ಮಾಡಿ, ಬಳಕೆದಾರರು ಬ್ಲೂ ಟಿಕ್ ಪಡೆಯಬೇಕಾದರೆ ಚಂದಾದಾರರಾಗುವ ಪದ್ಧತಿ ಜಾರಿಗೊಳಿಸಿದ್ದರು. ಈಗ ಪ್ರಜ್ವಲ್ ರೇವಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ.
Click 👇