ನ್ಯೂಸ್ ನಾಟೌಟ್: ಮತ ಹಾಕಲು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಸಾಲಿನಲ್ಲಿ ನಿಲ್ಲಿ ಎಂದು ವ್ಯಕ್ತಿ ಶಾಸಕನಿಗೆ ಹೇಳಿದ್ದಾನೆ. ಈ ವೇಳೆ ಶಾಸಕ ಆತನ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಸುಮ್ಮನಿರದ ಮತದಾರ ಕೂಡ ತಿರುಗಿಸಿ ಬಾರಿಸಿದ ಘಟನೆ ಮೇ.13 ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಗುಂಟೂರು ವಿಧಾನಸಭಾ ಕ್ಷೇತ್ರ ಪೋಲಿಂಗ್ ಬೂತೊಂದರಲ್ಲಿ ಈ ಘಟನೆ ನಡೆದಿದೆ.
ಈ ವೇಳೆ ಶಾಸಕನ ಜೊತೆಗಿದ್ದವರೆಲ್ಲಾ ಬೆಂಬಲಿಗರೆಲ್ಲಾ ಸೇರಿಕೊಂಡು ಸಾಮಾನ್ಯ ಮತದಾರನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ ಹಲವೆಡೆ 4ನೇ ಹಂತದ ಚುನಾವಣೆ ನಡೆಯುತ್ತಿದ್ದರೆ, ಆಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾವಣೆ ನಡೆಯುತ್ತಿದೆ. ಈ ವೇಳೆ ಅಚಾತುರ್ಯವೊಂದು ನಡೆದಿದ್ದು, ಮತ ಹಾಕಲು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಶಾಸಕನೋರ್ವ ಕೆನ್ನೆಗೆ ಬಾರಿಸಿದ್ದಾನೆ.
ಮತದಾರರು ತಮ್ಮ ಕ್ಷೇತ್ರದಲ್ಲಿ ವೋಟು ಹಾಕುವುದಕ್ಕಾಗಿ ಸಾಲಾಗಿ ನಿಂತಿದ್ದ ವೇಳೆ ಅಲ್ಲಿಗೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಪಕ್ಷದ ಹಾಲಿ ಶಾಸಕ ಎ ಶಿವಕುಮಾರ್ ಬಂದಿದ್ದು, ಸಾಮಾನ್ಯರಂತೆ ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮತದಾರನೋರ್ವನ ಕೆನ್ನೆಗೆ ಶಾಸಕ ಎ. ಶಿವಕುಮಾರ್ ಬಾರಿಸಿದ್ದಾನೆ. ಈ ವೇಳೆ ಮತದಾರನೂ ತಿರುಗಿಸಿ ಬಾರಿಸಿದ್ದಾನೆ. ಆದರೆ ಈ ವೇಳೆ ಶಾಸಕ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರೆಲ್ಲರೂ ಪಾಪದ ಮತದಾರನೋರ್ವನ ಮೇಲೆ ತೋಳಗಳಂತೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
Click 👇