- +91 73497 60202
- [email protected]
- November 22, 2024 9:12 AM
ನ್ಯೂಸ್ ನಾಟೌಟ್: ಮೊಬೈಲ್ ಆ್ಯಪ್ ಬಳಸಿ ತನ್ನ ಧ್ವನಿಯನ್ನು ಮಹಿಳೆಯರ ರೀತಿಯಲ್ಲಿ ಬದಲಾಯಿಸಿಕೊಂಡು ಕಾಲೇಜು ಯುವತಿಯರನ್ನು ಸೆಳೆದು ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಯುವಕನೊಬ್ಬನನ್ನು ಮಧ್ಯಪ್ರದೇಶದ ಸಿಧ್ದಿ ಜಿಲ್ಲೆಯ ಪೊಲೀಸರು ಶನಿವಾರ(ಮೇ.25) ಬಂಧಿಸಿದ್ದಾರೆ. ಬಂಧಿತನನ್ನು ಹಾಲು ಮಾರುವ ಬ್ರಿಜೇಶ್ ಕುಶ್ವಾಹಾ ಎಂದು ಗುರುತಿಸಲಾಗಿದ್ದು ಆತನ ಕೃತ್ಯಕ್ಕೆ ಸಹಕರಿಸಿದ್ದ ಇನ್ನೂ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಅನಕ್ಷರಸ್ಥ ಆಗಿದ್ದ ಬ್ರಿಜೇಶ್ ಮೊಬೈಲ್ ಆ್ಯಪ್ ಸಹಾಯದಿಂದ ತನ್ನ ಧ್ವನಿಯನ್ನು ಮಹಿಳೆಯರ ರೀತಿಯಲ್ಲಿ ಬದಲಾಯಿಸಿಕೊಂಡು ತಾನೊಬ್ಬ ಕಾಲೇಜು ಶಿಕ್ಷಕಿ, ಶಿಷ್ಯ ವೇತನ ಕೊಡಿಸುತ್ತೇನೆ ಎಂದು ಬುಡಕಟ್ಟು ಯುವತಿಯರನ್ನು ನಂಬಿಸುತ್ತಿದ್ದ. ಬಳಿಕ ನಂಬಿ ಬರುತ್ತಿದ್ದ ಯುವತಿಯನ್ನು ತನ್ನ ಆಪ್ತರ ಮೂಲಕ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಗುರುತು ಸಿಗದಂತೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಅತ್ಯಾಚಾರ ಎಸಗುತ್ತಿದ್ದ. ಇದೇ ರೀತಿ ಏಳು ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿತನ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವಂತೆ ಸರ್ಕಾರ ಸೂಚಿಸಿದೆ. ಇತ್ತೀಚೆಗೆ ಸಂತ್ರಸ್ತ ಕೆಲ ಯುವತಿಯರು ಈ ಕುರಿತು ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ